ಮನೋರಂಜನೆ

ವನಿತೆಯರ ಟ್ವೆಂಟಿ-20 ಪಂದ್ಯ: ಆಫ್ರಿಕವನ್ನು 16 ರನ್‌ನಿಂದ ಮಣಿಸಿದ ಭಾರತ

Pinterest LinkedIn Tumblr

mandana

ಬೆಂಗಳೂರು, ನ.30: ದಕ್ಷಿಣ ಆಫ್ರಿಕ ವಿರುದ್ಧದ ಏಕೈಕ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ 16 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಸ್ಮತಿ ಮಂಧಾನಾ 52 ರನ್ (42 ಎಸೆತ, 5 ಬೌಂಡರಿ) ಅರ್ಧಶತಕದ ನೆರವಿನಿಂದ 5 ವಿಕೆಟ್‌ಗಳ ನಷ್ಟಕ್ಕೆ 146 ರನ್ ಗಳಿಸಿತ್ತು. ಗೆಲ್ಲಲು 147 ರನ್ ಗುರಿ ಪಡೆದ ದಕ್ಷಿಣ ಆಫ್ರಿಕ ತಂಡ ಭಾರತದ ಆಫ್-ಸ್ಪಿನ್ನರ್ ಪೂನಮ್ ಯಾದವ್ (3-18) ಹಾಗೂ ಎಡಗೈ ಸ್ಪಿನ್ನರ್ ಎಕ್ತಾ ಬಿಶ್ತ್ (2-20) ದಾಳಿಗೆ ಸಿಲುಕಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 130 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡಕ್ಕೆ ಆರಂಭಿಕ ಆಟಗಾರ್ತಿ ಹಾಗೂ ನಾಯಕಿ ಮಿಥಾಲಿ ರಾಜ್ (40 ರನ್, 31 ಎಸೆತ, 5 ಬೌಂಡರಿ, 2 ಸಿಕ್ಸರ್) ಉತ್ತಮ ಅಡಿಪಾಯ ಹಾಕಿಕೊಟ್ಟರು. ಶಿಖಾ ಪಾಂಡೆ (23 ರನ್, 18 ಎಸೆತ, 1 ಬೌಂಡರಿ, 1 ಸಿಕ್ಸರ್) ಅವರೊಂದಿಗೆ ನಾಲ್ಕನೆ ವಿಕೆಟ್‌ಗೆ 63 ರನ್ ಸೇರಿಸಿದ ಸ್ಮತಿ ಮಂಧಾನಾ ತಂಡದ ಇನಿಂಗ್ಸ್‌ಗೆ ಆಧಾರವಾದರು. 11ನೆ ಓವರ್‌ಗೆ 1 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದ್ದ ದಕ್ಷಿಣ ಆಫ್ರಿಕ ತಂಡ ಉತ್ತಮ ಆರಂಭವನ್ನೆ ಪಡೆದಿತ್ತು. ಆದರೆ, ಡ್ಯಾನೆ ವ್ಯಾನ್ ನಿಕಾರ್ಕ್(46 ರನ್, 47 ಎಸೆತ, 5 ಬೌಂಡರಿ) ಹಾಗೂ ಮರಿಝಾನ್ ಕಾಪ್(33 ರನ್, 16 ಎಸೆತ, 2 ಬೌಂಡರಿ, 3 ಸಿಕ್ಸರ್) ಹೋರಾಟದ ಹೊರತಾಗಿಯೂ ಕೆಳ ಕ್ರಮಾಂಕದ ಕುಸಿತಕ್ಕೆ ಒಳಗಾದ ಆಫ್ರಿಕ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿತು.

ಸಂಕ್ಷಿಪ್ತ ಸ್ಕೋರ್ ವಿವರ
ಭಾರತದ ಮಹಿಳಾ ತಂಡ 20 ಓವರ್‌ಗಳಲ್ಲಿ 146/5
(ಮಿಥಾಲಿ ರಾಜ್ 40, ಸ್ಮತಿ ಮಂಧಾನಾ 52, ಶಿಖಾ ಪಾಂಡೆ 23, ಸೊನೆಟ್ ಲೌಬೆರ್ 2-29)
ದಕ್ಷಿಣ ಆಫ್ರಿಕ ಮಹಿಳಾ ತಂಡ20 ಓವರ್‌ಗಳಲ್ಲಿ 130/9
(ಡ್ಯಾನೆ ವ್ಯಾನ್ ನಿಕೆರ್ಕ್ 46, ಮರಿಝಾನ್ನೆರ್ ಕಾಪ್ 33, ಎಕ್ತಾ ಬಿಶ್ತ್ 2-20, ಪೂನಮ್ ಯಾದವ್ 3-18).

Write A Comment