ಶಾರ್ಜಾ, ನ.30: ಸ್ಪಿನ್ನರ್ ಮಾರ್ಕ್ ಗ್ರೆಗ್ ಅಮೋಘ ಬೌಲಿಂಗ್‌ನ ನೆರವಿನಿಂದ ರವಿವಾರ ನ್ಯೂಝಿಲೆಂಡ್ ತಂಡ ಪಾಕಿಸ್ತಾನ ವಿರುದ್ಧದ ಮೂರನೆ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 80 ರನ್‌ಗಳಿಂದ ಗೆಲುವು ಸಾಧಿಸಿದೆ.
ಈ ಗೆಲುವಿನೊಂದಿಗೆ ಕಿವೀಸ್ ತಂಡ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಡ್ರಾಗೊಳಿಸಲು ಯಶಸ್ವಿಯಾಗಿದೆ. ಮೊದಲ ಪಂದ್ಯವನ್ನು ಪಾಕ್ ಜಯಿಸಿದರೆ, ಎರಡನೆ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು. ಕ್ರೆಗ್ ಪಂದ್ಯವೊಂದರಲ್ಲಿ 10 ವಿಕೆಟ್ ಗೊಂಚಲು ಪಡೆದ ಕಿವೀಸ್‌ನ ಮೂರನೆ ಸ್ಪಿನ್ನರ್ ಎನಿಸಿಕೊಂಡರು. ನ್ಯೂಝಿಲೆಂಡ್ ತಂಡ ಪಾಕ್ ವಿರುದ್ದ ಮೂರನೆ ಗರಿಷ್ಠ ಅಂತರದ ರನ್‌ನಿಂದ ಜಯ ಸಾಧಿಸಿದೆ.
1969/70ರ ನಂತರ ಪಾಕ್ ಮೊದಲ ಬಾರಿ ಕಿವೀಸನ್ನು ತವರು ಸರಣಿಯಲ್ಲಿ ಮಣಿಸಲು ವಿಫಲವಾಗಿದೆ. ಪಾಕ್ ಮೊದಲ ಇನಿಂಗ್ಸ್‌ನಲ್ಲಿ ಮುಹಮ್ಮದ್ ಹಫೀಝ್ ಭರ್ಜರಿ ಶತಕದ (195) ಹೊರತಾಗಿಯೂ 351 ರನ್‌ಗೆ ಆಲೌಟಾಗಿತ್ತು. ರವಿವಾರ ನಡೆದ ಎರಡನೆ ಇನಿಂಗ್ಸ್‌ನಲ್ಲಿ ಅಸದ್ ಶಫೀಖ್ (137 ರನ್) ಐದನೆ ಶತಕ ಸಿಡಿಸಿದ ಹೊರತಾಗಿಯೂ ಪಾಕ್ 63.3 ಓವರ್‌ಗಳಲ್ಲಿ 259 ರನ್‌ಗೆ ಆಲೌಟಾಗಿ ಹೀನಾಯ ಸೋಲನುಭವಿಸಿತು. ಪಾಕ್ ಪರ ಮೊದಲ ಇನಿಂಗ್ಸ್‌ನಂತೆ ಎರಡನೆ ಇನಿಂಗ್ಸ್‌ನಲ್ಲೂ ಕೇವಲ ಒಬ್ಬ ಬ್ಯಾಟ್ಸ್‌ಮನ್ ಶತಕ ಸಿಡಿಸಿದರೆ ಉಳಿದ ಯಾವೊಬ್ಬ ದಾಂಡಿಗನೂ ಅರ್ಧಶತಕ ಬಾರಿಸಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್ ಪಡೆದಿದ್ದ ಸ್ಪಿನ್ನರ್ ಕ್ರೆಗ್ ಎರಡನೆ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗಳನ್ನು ಉರುಳಿಸಿದರು. ವೇಗದ ಬೌಲರ್ ಬೌಲ್ಟ್ (4-38) ಪಾಕ್‌ನ ಅಗ್ರ ಕ್ರಮಾಂಕವನ್ನು ಬೇಧಿಸಲು ಸಫಲರಾದರು.
ಕ್ರೆಗ್ ಹಾಗೂ ಬೌಲ್ಟ್ ದಾಳಿಗೆ ತತ್ತರಿಸಿದ ಪಾಕ್ ಒಂದು ಹಂತದಲ್ಲಿ 63 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. 6ನೆ ವಿಕೆಟ್‌ಗೆ 77 ರನ್ ಸೇರಿಸಿದ ಶಫೀಖ್ ಹಾಗೂ ಸರ್ಫ್ರಾಝ್ ಅಹ್ಮದ್(37) ತಂಡವನ್ನು ಸ್ವಲ್ಪಮಟ್ಟಿಗೆ ಆಧರಿಸಿದರು. ಆದರೆ, ಈ ಜೋಡಿಯನ್ನು ಐಶ್ ಸೋಧಿ (2-82) ಬೇರ್ಪಡಿಸಿದರು. ಪಂದ್ಯದಲ್ಲಿ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿದ ಮಾರ್ಕ್ ಕ್ರೆಗ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಹಾಗೂ ಪಾಕ್‌ನ ಮುಹಮ್ಮದ್ ಹಫೀಝ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ಪ್ರಥಮ ಇನಿಂಗ್ಸ್: 351 ರನ್
ನ್ಯೂಝಿಲೆಂಡ್ ಪ್ರಥಮ ಇನಿಂಗ್ಸ್143.1 ಓವರ್‌ಗಳಲ್ಲಿ 690 ರನ್‌ಗೆ ಆಲೌಟ್
(ಮೆಕಲಮ್ 202, ವಿಲಿಯಮ್ಸನ್ 192, ಕ್ರೆಗ್ 65, ಟೇಲರ್ 50, ಆ್ಯಂಡರ್ಸನ್ 50, ಸೌಥಿ 50, ರಾಹತ್ ಅಲಿ 4-99, ಯಾಸಿರ್ ಷಾ 4-193)
ಪಾಕಿಸ್ತಾನ ದ್ವಿತೀಯ ಇನಿಂಗ್ಸ್63.3 ಓವರ್‌ಗಳಲ್ಲಿ 259 ರನ್‌ಗೆ ಆಲೌಟ್
(ಅಸದ್ ಶಫೀಖ್ 137, ಸರ್ಫ್ರಾಝ್ ಅಹ್ಮದ್ 37, ಬೌಲ್ಟ್ 4-38, ಕ್ರೆಗ್ 3-109, ಸೋಧಿ 2-82)