ಮನೋರಂಜನೆ

ಸೋನಕ್ಷಿ ಸಿನ್ಹಾಗೆ ಶಾರೂಖ್‌ಖಾನ್ ರೋಮ್ಯಾಂಟಿಕ್ ಹೀರೋ !

Pinterest LinkedIn Tumblr

srk-and-sonakshi

ಲಿಂಗಾ ನಾಯಕಿ ಸೋನಾಕ್ಷಿಗೆ ಯಾರಂತೆ ರೋಮ್ಯಾಂಟಿಕ್ ಹೀರೋ? ಇವತ್ತು ಅವಳನ್ನು ಎವರೆಸ್ಟ್ ಎತ್ತರಕ್ಕೇರಿಸಿರುವ ರಜನೀಕಾಂತ್ ಇರಬಹುದಾ? ಊಹ್ಞೂಂ! ಬಾಲಿವುಡ್‌ನಲ್ಲಿ ಗಟ್ಟಿ ಹೆಜ್ಜೆಯೂರಲು ಕಾರಣನಾದ ಸಲ್ಲು ಇರಬಹುದಾ? ಅದಕ್ಕೂ ಊಹ್ಞೂಂ ಅಂತಾಳವಳು.

ಶಾರೂಖ್‌ಖಾನ್ ಈಕೆಗೆ ರೋಮ್ಯಾಂಟಿಕ್ ಹೀರೋ ಅಂತೆ! ಸಂದರ್ಶವೊಂದರಲ್ಲಿ ‘ಶಾರೂಖ್‌’-ಅಮೀರ್‌ನಲ್ಲಿ ನಿಮಗೆ ಹಿಡಿಸದ ಗುಣ ಯಾವುದು? ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಸೋನಾಕ್ಷಿ, ‘ಗೊತ್ತಿಲ್ಲ. ಕಿಂಗ್‌ಖಾನ್ ಬಾಲಿವುಡ್‌ನ ಅಲ್ಟಿಮೇಟ್ ರೋಮ್ಯಾಂಟಿಕ್ ಹೀರೋ’ ಎಂದಷ್ಟೇ ಹೇಳಿ ನಕ್ಕಳು.

ಅಂದ ಹಾಗೆ, ಸೋನಾಕ್ಷಿ ಇವತ್ತಿನವರೆಗೂ ಶಾರೂಖ್ ಜತೆ ನಟಿಸಿಯೇ ಇಲ್ಲ. ಕಾಜೋಲ್‌ನಿಂದ ಸೋನಾಕ್ಷಿ ತನಕ ಕಿಂಗ್‌ಖಾನ್ ಸಾರ್ವಕಾಲಿಕ ರೋಮ್ಯಾಂಟಿಕ್ ಹೀರೋನೇ!

Write A Comment