ಮುಂಬಯಿ, ಜ.20: ಮಹಾರಾಷ್ಟ್ರ ರಾಜ್ಯದಲ್ಲಿನ ಮಾಧ್ಯಮ ಪ್ರತಿನಿಧಿಗಳ ಪ್ರತಿಷ್ಠಿತ ಸಂಸ್ಥೆಯಾದ ವಿೂಡಿಯಾ ಸ್ಪೋರ್ಟ್ಸ್ ಅಕಾಡೆಮಿ ಸಂಸ್ಥೆಯು ವಾರ್ಷಿಕವಾಗಿ ಆಯೋಜಿಸುತ್ತಿರುವ ವಿೂಡಿಯಾ ಕಪ್ ಕ್ರಿಕೆಟ್-2015 ಪಂದ್ಯಾಟಕ್ಕೆ ಆಯ್ಕೆಯಾದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ಕರ್ನಾಟಕ ಟೈಮ್ಸ್) ತಂಡವು ಇಂದಿಲ್ಲಿ ಆದಿತ್ಯವಾರ ಅಪರಾಹ್ನ ನಗರದ ಚೆರ್ನಿರೋಡ್ ಪಶ್ಚಿಮದಲ್ಲಿನ ವಿಲ್ಸನ್ ಕಾಲೇಜು ಜಿಮ್ಖಾನಾ ಕ್ರೀಡಾಂಗಣದಲ್ಲಿ ನಡೆಸಲ್ಪಟ್ಟ ಮೊದಲ ಸುತ್ತಿನ ಪಂದ್ಯಾಟದಲ್ಲಿ ಮಹಾರಾಷ್ಟ್ರ ಟೈಮ್ಸ್ ತಂಡವನ್ನು ಮಣಿಸಿದ ಕರ್ನಾಟಕ ಟೈಮ್ಸ್ ತಂಡವು ಜಯ ಸಾಧಿಸಿತು.
ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ್ ಪಾಲೆತ್ತಾಡಿ ಅವರ ನಿರ್ದೇಶನ ಮತ್ತು ಗೌ ಪ್ರ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಅವರ ನೇತೃತ್ವ, ಸಂಘದ ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಜಯ ಸಿ.ಪೂಜಾರಿ ಮುಂದಾಳುತ್ವ ಹಾಗೂ ರಮೇಶ್ ಜೆ.ಮರೋಳಿ ನಾಯಕತ್ವದಲ್ಲಿ ಕರ್ನಾಟಕ ಟೈಮ್ಸ್ ತಂಡವು ಮಹಾರಾಷ್ಟ್ರ ಟೈಮ್ಸ್ ತಂಡದೊಂದಿಗೆ ಸೆಣಸಾಡಿ ಪ್ರಥಮ ಸುತ್ತಿನಲ್ಲಿ ಜಯಗಳಿಸಿತು.
ಕಳೆದ ಶನಿವಾರ ಚೆರ್ನಿರೋಡ್‌ನ ಪೋಲಿಸ್ ಜಿಮ್ಖಾನಾ ಕ್ರೀಡಾಂಗಣದಲ್ಲಿ ಆರಂಭಗೊಂಡ ವಿೂಡಿಯಾ ಕಪ್ ಕ್ರಿಕೆಟ್-2015ನ್ನು ಮರಾಹಾರಾಷ್ಟ್ರ ರಾಜ್ಯದ ಕ್ರೀಡಾ ಮತ್ತು ಶಿಕ್ಷಣ ಸಚಿವ ವಿನೋದ್ ತಾವ್ಡೆ ಅವರು ಬ್ಯಾಟಿಂಗ್‌ಗೈದು ಪಂದ್ಯಾಟ ಉದ್ಘಾಟಿಸಿದ್ದರು. ಈ ಬಾರಿ ಮಹಾರಾಷ್ಟ್ರ ರಾಜ್ಯದಾದ್ಯಂತದ ಸುಮಾರು 98 ತಂಡಗಳು ವಿೂಡಿಯಾ ಕಪ್‌ನಲ್ಲಿ ಭಾಗವಹಿಸಿದ್ದು ಇಂದಿಲ್ಲಿ ನಡೆಸಲ್ಪಟ್ಟ ಪಂದ್ಯಾಟದಲ್ಲಿ ಕನ್ನಡಿಗ ಪತ್ರಕರ್ತರ ಸಂಘದ ಕರ್ನಾಟಕ ಟೈಮ್ಸ್ ತಂಡವು ವಿೂಡಿಯಾ ಕಪ್ ಕ್ರಿಕೆಟ್‌ನಲ್ಲಿ ತೃತೀಯ ಬಾರಿಗೆ ಭಾಗವಹಿಸಿ ಗೆಲುವು ಸಾಧಿಸಿದೆ. ಪಂದ್ಯಾಟದಲ್ಲಿ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ಜವಾಹರ್ ನಾಡರ್, ಗೌ ಕಾರ್ಯದರ್ಶಿ ಕೆಲ್ವಿನ್ ಜೋಶ್ವಾ ಉಡುಪಿ, ಸಮೀರ್ ಗುರವ್ ಮತ್ತಿತರ ಪದಾಧಿಕಾರಿಗಳರಿದ್ದು, ಮಾರುತಿ ಗಾಯಕ್ವಾಡ್ ಕಮೆಂಟ್ರಿಯಲ್ಲಿ ಸಹಕರಿಸಿದರು.
ಕರ್ನಾಟಕ ಟೈಮ್ಸ್ ತಂಡದಲ್ಲಿ ಜಯ ಸಿ.ಪೂಜಾರಿ, ರಮೇಶ್ ಜೆ.ಮರೋಳಿ, ರವೀಂದ್ರ ಆರ್.ಪೂಜಾರಿ, ಪುರಂದರ ಜಿ.ಅವಿೂನ್, ಅಶೋಕ್ ದೇವಾಡಿಗ, ಭರತ್ ಎ.ಶೆಟ್ಟಿ, ಸಂತೋಷ್ ಬಿಜೂರು, ಸಾ.ದಯಾ (ದಯಾನಂದ ಸಾಲ್ಯಾನ್), ಹ್ಯಾರಿ ಸಿಕ್ವೇರಾ, ಸುರೇಶ್ ಶೆಟ್ಟಿ ಯೆಯ್ಯಡಿ, ರತ್ನಾಕರ ಮಟ್ಟಿ, ಗೋಪಾಲ ತ್ರಾಸಿ ಪಂದ್ಯಾಟದಲ್ಲಿ ಅಟವನ್ನಾಡಿದರು. ಪತ್ರಕರ್ತರ ಸಂಘದ ಗುರುದತ್ತ್ ಎಸ್.ಪೂಂಜಾ, ಶ್ರೀಧರ್ ಉಚ್ಚಿಲ್, ಮಾ ರಾಘವೇಂದ್ರ ಸಾಲ್ಯಾನ್, ಮಾ ತನ್ಮಯ ಎಸ್.ಶೆಟ್ಟಿ ಉಪಸ್ಥಿತರಿದ್ದು ಕನ್ನಡಿಗ ಪತ್ರಕರ್ತರ ಸಂಘದ ಆಟಗಾರರಿಗೆ ಪ್ರೋತ್ಸಾಹಿಸಿದರು. ಕನ್ನಡಿಗ ಪತ್ರಕರ್ತರ ಸಂಘದ ಗೌ ಪ್ರ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಪಂದ್ಯಾಟಕ್ಕೆ ಅವಕಾಶ ಒದಗಿಸಿದ ಮತ್ತು ಭಾಗವಹಿಸಿದ ಸರ್ವರ ಅಭಾರ ಮನ್ನಿಸಿದರು. ಸಂಘದ ಅಧ್ಯಕ್ಷ ಚಂದ್ರಶೇಖರ್ ಪಾಲೆತ್ತಾಡಿ ಮತ್ತು ಪದಾಧಿಕಾರಿಗಳು ವಿಜೇತ ಕರ್ನಾಟಕ ಟೈಮ್ಸ್ ತಂಡಕ್ಕೆ ಶುಭಾರೈಸಿದರು.