ಪರ್ತ್, ಮಾ.6: ನಾಯಕ ಮಹೇಂದ್ರ ಸಿಂಗ್ ಧೋನಿ ಮ್ಯಾಚ್ ಫಿನಿಶರ್ ಆಟ ಮತ್ತು ವೇಗದ ಬೌಲರ್ ಮುಹ ಮ್ಮದ್ ಶಮಿ ಶಿಸ್ತಿನ ದಾಳಿಯ ನೆರವಿನಲ್ಲಿ ಟೀಮ್ ಇಂಡಿ ಯಾ ಶುಕ್ರವಾರ ನಡೆದ ವಿಂಡೀಸ್ ವಿರುದ್ಧದ ವಿಶ್ವಕಪ್‌ನ ‘ಬಿ’ ಗುಂಪಿನ ಪಂದ್ಯದಲ್ಲಿ 4 ವಿಕೆಟ್‌ಗಳ ಜಯ ಗಳಿಸಿದೆ.
ಭಾರತಕ್ಕೆ ಇದು ನಾಲ್ಕನೆ ಗೆಲುವು. ಈ ಗೆಲುವಿ ನೊಂದಿಗೆ ಅದು ಬಿ.ಗುಂಪಿನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿದ ಮೊದಲ ತಂಡವಾಗಿದೆ. 8 ಓವರ್‌ಗಳಲ್ಲಿ 35ಕ್ಕೆ 3 ವಿಕೆಟ್ ಉಡಾಯಿಸಿದ ಭಾರತದ ವೇಗದ ಬೌಲರ್‌ಶಮಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಗೆಲುವಿಗೆ 183 ರನ್‌ಗಳ ಸವಾಲನ್ನು ಪಡೆದಿದ್ದ ಭಾರತ ಇನ್ನೂ 65 ಎಸೆತಗಳು ಬಾಕಿ ಉಳಿದಿರುವಾಗಲೇ 6 ವಿಕೆಟ್‌ಗೆ 185 ರನ್ ಮಾಡಿತು. ನಾಯಕ ಮಹೇಂದ್ರ ಸಿಂಗ್ ಧೋನಿ ಔಟಾಗದೆ 45 ರನ್ (96 ನಿಮಿಷ, 56 ಎಸೆತ, 3 ಬೌಂಡರಿ,1 ಸಿಕ್ಸರ್) ಗಳಿಸಿ ತಂಡದ ಗೆಲು ವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರಿಗೆ ಸಾಥ್ ನೀಡಿದ ಅಶ್ವಿನ್ ಔಟಾಗದೆ ಔಟಾಗದೆ 16 ರನ್ ಮಾಡಿದರು. 17.5 ಓವರ್‌ಗಳಲ್ಲಿ 78ಕ್ಕೆ 4 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದ ಭಾರತದ ಬ್ಯಾಟಿಂಗ್ ನ್ನು ಮುನ್ನಡೆಸಿದ ಧೋನಿ ನಿಧಾನವಾಗಿ ಆಡಿ ತಂಡ ವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದರು. ಏಳನೆ ವಿಕೆಟ್‌ಗೆ ಧೋನಿ ಮತ್ತು ಅಶ್ವಿನ್ ಮುರಿಯದ ಜೊತೆಯಾಟದಲ್ಲಿ 51 ರನ್ ಸೇರಿಸಿದರು. ಭಾರತದ ಆರಂಭ ಚೆನ್ನಾಗಿರಲಿಲ್ಲ. 4.1ನೆ ಓವರ್‌ನಲ್ಲಿ ಆರಂಭಿಕ ದಾಂಡಿಗ ಶಿಖರ್ ಧವನ್ (9) ವಿಕೆಟ್ ಕಳೆದುಕೊಂಡಿತ್ತು. 7ನೆ ಓವರ್‌ನ ಅಂತಿಮ ಎಸೆತದಲ್ಲಿ ರೋಹಿತ್ ಶರ್ಮ(7) ಔಟಾದರು. ಜೆರೋಮ್ ಟೇಲರ್ ಅವರು ಧವನ್ ಮತ್ತು ರೋಹಿತ್ ಶರ್ಮಗೆ ಬೇಗನೆ ಪೆವಿಲಿಯನ್ ಹಾದಿ ತೋರಿಸಿದರು. ಉಪನಾಯಕ ವಿರಾಟ್ ಕೊಹ್ಲಿ 36 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ 33 ರನ್ ಸೇರಿಸಿದರು.
ಅಜಿಂಕ್ಯ ರಹಾನೆ (14),ಸುರೇಶ್ ರೈನಾ ( 22) ,ರವೀಂದ್ರ ಜಡೇಜ(13) ಮತ್ತು ಆರ್. ಅಶ್ವಿನ್(ಔಟಾ ಗದೆ 16ರನ್) ಎರಡಂಕೆಯ ಕೊಡುಗೆ ನೀಡಿದರು.
182ಕ್ಕೆ ನಿಯಂತ್ರಿಸಿದ ಭಾರತ: ವೇಗದ ಬೌಲರ್‌ಗಳ ಸ್ನೇಹಿ ಆಗಿರುವ ವಾಕಾ ಪಿಚ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್‌ಇಂಡೀಸ್ ತಂಡ 44.2 ಓವರ್‌ಗಳಲ್ಲಿ 182 ರನ್‌ಗಳಿಗೆ ಆಲೌಟಾಗಿತ್ತು.
ನಾಯಕ ಜೇಸನ್ ಹೋಲ್ಡರ್ ಗಳಿಸಿದ್ದ 57 ರನ್ ವಿಂಡೀಸ್ ಪರ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಭಾರತದ ಬೌಲಿಂಗ್ ವಿಭಾಗ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿ ವಿಂಡೀಸ್‌ನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿತ್ತು. ಭಾರತದ ಸ್ಟಾರ್ ಬೌಲರ್ ಮುಹಮ್ಮದ್ ಶಮಿ ಫಿಟ್‌ನೆಸ್ ಸಮಸ್ಯೆಯಿಂದ ಹೊರ ಬಂದು ಅಂತಿಮ ಹನ್ನೊಂದರಲ್ಲಿ ಸೇರಿಕೊಂಡಿದ್ದರು. ಅವರು ಕಳೆದ ಯುಎಇ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ಶಮಿ ವಿಂಡೀಸ್‌ನ ದಾಂಡಿಗರನ್ನು ಕಾಡಿದರು. ಅವರು ವಿಂಡೀಸ್‌ನ ಸ್ಫೋಟಕ ಬ್ಯಾಟ್ಸ್ ಮನ್ ಡ್ವೇಯ್ನ್ ಸ್ಮಿತ್ (6), ಕ್ರಿಸ್ ಗೇಲ್(21) ಮತ್ತು ಡರೆನ್ ಸಮ್ಮಿ (26) ಅವರನ್ನು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಅವಕಾಶ ನೀಡಲಿಲ್ಲ.
ಶಮಿಗೆ ಉಮೇಶ್ ಯಾದವ್(2-42), ಮೋಹಿತ್ ಶರ್ಮ (1-35), ರವಿಚಂದ್ರನ್ ಅಶ್ವಿನ್ (1-38) ಮತ್ತು ರವೀಂದ್ರ ಜಡೇಜ (2-27) ಉತ್ತಮ ಬೆಂಬಲ ನೀಡಿ ವಿಂಡೀಸ್‌ನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿಕೊಳ್ಳುವಲ್ಲಿ ನೆರವಾದರು.
ಒಂದು ಹಂತದಲ್ಲಿ 124 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್‌ನ ಬ್ಯಾಟಿಂಗ್‌ನ್ನು ಮುನ್ನಡೆಸಿದ ನಾಯಕ ಹೋಲ್ಡರ್ 9ನೆ ವಿಕೆಟ್
ಗೆ ಜೆರೋಮ್ ಟೇಲರ್ ಜೊತೆಗೂಡಿ 51 ರನ್ ಸೇರಿಸಿ ತಂಡದ ಸ್ಕೋರ್‌ನ್ನು 175ರ ಗಡಿ ದಾಟಿಸುವಲ್ಲಿ ನೆರವಾದರು. ವಿಂಡೀಸ್ 9.1 ಓವರ್‌ಗಳಲ್ಲಿ 35 ರನ್ ಸೇರಿಸು ವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಐದನೆ ವಿಕೆಟ್‌ಗೆ ಜೋನಾ ಥನ್ ಕಾರ್ಟರ್(21) ಮತ್ತು ಲಿಂಡ್ಲ್ ಸಿಮೊನ್ಸ್ (9) ಐದನೆ ವಿಕೆಟ್‌ಗೆ 32 ರನ್ ಸೇರಿಸಿದರು. ಆರಂಭಿಕ ದಾಂಡಿ ಗರಾದ ಮರ್ಲಾನ್ ಸ್ಯಾಮುಯೆಲ್ಸ್ (2) ಮತ್ತು ಸ್ಮಿತ್ ಔಟಾದ ಬಳಿಕ ಗೇಲ್ ಸ್ಫೋಟಕ ಬ್ಯಾಟಿಂಗ್‌ನ ಸೂಚನೆ ನೀಡಿದರು. 2 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದರು. ಆದರೆ ಶಮಿ ದಾಳಿಯನ್ನು ಸಮರ್ಥವಾಗಿ ಎದುರಿಸಲು ಗೇಲ್‌ಗೆ ಸಾಧ್ಯವಾಗಲಿಲ್ಲ.
ಭಾರತದ ಫೀಲ್ಡರ್‌ಗಳು ಕೆಲವು ಕ್ಯಾಚ್‌ಗಳನ್ನು ಕೈ ಚೆಲ್ಲಿದ್ದರೂ, ವಿಂಡೀಸ್‌ನ ದಾಂಡಿಗರಿಗೆ ಇದರ ಪ್ರಯೋ ಜನವನ್ನು ಚೆನ್ನಾಗಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ.
ಸ್ಕೋರ್ ಪಟ್ಟಿ
ವೆಸ್ಟ್‌ಇಂಡೀಸ್ 44.2 ಓವರ್‌ಗಳಲ್ಲಿ ಆಲೌಟ್ 182
ಡೇಯ್ನ ಸ್ಮಿತ್ ಸಿ ಧೋನಿ ಬಿ ಶಮಿ 6
ಕ್ರಿಸ್ ಗೇಲ್ ಸಿ ಮೋಹಿತ್ ಬಿ ಶಮಿ 21
ಸ್ಯಾಮುಯೆಲ್ಸ್ ರನೌಟ್ (ಮೋಹಿತ್/ಕೊಹ್ಲಿ) 2
ಕಾರ್ಟೆರ್ ಸಿ ಶಮಿ ಬಿ ಅಶ್ವಿನ್ 21
ದಿನೇಶ್ ರಾಮ್ದೀನ್ ಬಿ ಯಾದವ್ 0
ಲಿಂಡ್ಲ್ ಸಿಮೊನ್ಸ್ ಸಿ ಯಾದವ್ ಬಿ ಮೋಹಿತ್9
ಡರೆನ್ ಶಮ್ಮಿ ಸಿ ಧೋನಿ ಬಿ ಶಮಿ 26
ಅಂಡ್ರೆ ರಸ್ಸೆಲ್ ಸಿ ಕೊಹ್ಲಿ ಬಿ ಜಡೇಜ 8
ಜೇಸನ್ ಹೋಲ್ಡರ್ ಸಿ ಕೊಹ್ಲಿ ಬಿ ಜಡೇಜ 57
ಜೆರೋಮ್ ಟೇಲರ್ ಸಿ ಆ್ಯಂಡ್ ಬಿ ಯಾದವ್ 11 ಕೆಮರ್ ರೋಚ್ ಔಟಾಗದೆ 0
ಇತರ 21
ವಿಕೆಟ್ ಪತನ:
1-8(ಸ್ಮಿತ್,4.5), 2-15(ಸ್ಯಾಮುಯೆಲ್ಸ್, 7.2), 3-35 (ಗೇಲ್,8.6), 4-35(ರಾಮ್ದೀನ್, 9.1), 5-67 (ಸಿಮೊನ್ಸ್ , 18.1), 6-71(ಕಾರ್ಟೆರ್, 21.5), 7-85(ರಸ್ಸೆಲ್, 24.1), 8-124(ಸಮ್ಮಿ, 35.4), 9-175(ಟೇಲರ್, 42.6), 10-182 (ಹೋಲ್ಡರ್, 44.2).
ಬೌಲಿಂಗ್ ವಿವರ:
ಮುಹಮ್ಮದ್ ಶಮಿ 8-2-35-3
ಉಮೇಶ್ ಯಾದವ್ 10-1-42-2
ರವಿಚಂದ್ರನ್ ಅಶ್ವಿನ್ 9-0-38-1
ಮೋಹಿತ್ ಶರ್ಮ 9-2-35-1
ರವೀಂದ್ರ ಜಡೇಜ 8.2-0-27-2
ಭಾರತ 39.1 ಓವರ್‌ಗಳಲ್ಲಿ 185/6
ರೋಹಿತ್ ಶರ್ಮ ಸಿ ರಾಮ್ದೀನ್ ಬಿ ಟೇಲರ್ ಶಿಖರ್ ಧವನ್ ಸಿ ಸಮ್ಮಿ ಬಿ ಟೇಲರ್ 9
ವಿರಾಟ್ ಕೊಹ್ಲಿ ಸಿ ಸ್ಯಾಮುಯೆಲ್ಸ್ ಬಿ ರಸ್ಸೆಲ್ 33
ಅಜಿಂಕ್ಯ ಸಿ ರಾಮ್ದೀನ್ ಬಿ ರೋಚ್ 14
ಸುರೇಶ್ ರೈನಾ ಸಿ ರಾಮ್ದೀನ್ ಬಿ ಸ್ಮಿತ್ 22
ಮಹೇಂದ್ರ ಸಿಂಗ್ ಧೋನಿ ಔಟಾಗದೆ 45
ಜಡೇಜ ಸಿ ಸ್ಯಾಮುಯೆಲ್ಸ್ ಬಿ ರಸ್ಸೆಲ್ 13
ರವಿಚಂದ್ರನ್ ಅಶ್ವಿನ್ ಔಟಾಗದೆ 16
ಇತರ 26ವಿಕೆಟ್ ಪತನ:
1-11(ಧವನ್, 4.1), 2-20(ಆರ್.ಶರ್ಮ, 6.6), 3-63(ಕೊಹ್ಲಿ, 14.6), 4-78(ರಹಾನೆ, 17.5), 5-107(ರೈನಾ, 22.5), 6-134(ಜಡೇಜ, 29.3). ಬೌಲಿಂಗ್ ವಿವರ:
ಜೆರೋಮ್ ಟೇಲರ್ 8-0-33-2
ಜೇಸನ್ ಹೋಲ್ಡರ್7-0-29-0
ಕೆಮರ್ ರೋಚ್ 8-1-44-1
ಅಂಡ್ರೆ ರಸ್ಸೆಲ್ 8-0-43-2
ಡ್ವೇಯ್ನ ಸ್ಮಿತ್ 5-0-22-1
ಮರ್ಲಾನ್ ಸ್ಯಾಮುಯೆಲ್ಸ್ 3.1-0-10-0