ಚಿತ್ರ: ‘ಮಾಸ್ಟರ್ ಮೈಂಡ್’
ತಾರಾಗಣ: ರಾಜವರ್ಧನ್, ತಮನ್ನಾ, ದಿವ್ಯಾ ಗೌಡ, ಭಕ್ತಿ, ಬುಲೆಟ್ ಪ್ರಕಾಶ್, ಇತರರು
ನಿರ್ದೇಶನ: ಕುಮಾರ್ ಗೋವಿಂದ್
ನಿರ್ಮಾಪಕರು: ಕುಮಾರ್ ಗೋವಿಂದ್
ಪ್ರೀತಿ, ಪ್ರೇಮ ಇಲ್ಲಿ ನೆಪ ಮಾತ್ರ. ಪ್ರಧಾನವಾಗಿ ಕಾಣುವುದು ಬರೀ ಸೇಡು. ಅದೊಂದು ಎಳೆಯನ್ನಿಟ್ಟುಕೊಂಡೇ ಎರಡು ತಾಸು ಪ್ರೇಕ್ಷಕರನ್ನು ಹಿಡಿದಿಡುವ ‘ಸಾಹಸ’ ಮಾಡಿದ್ದಾರೆ ನಿರ್ದೇಶಕ ಕುಮಾರ್ ಗೋವಿಂದ್. ಕಥೆ ಎಲ್ಲೆಲ್ಲೋ ಅಲೆದಾಡಿ ಮೊದಲಿದ್ದಲ್ಲಿಗೇ ಬಂದು ಸೇರುತ್ತದೆ. ಆ ಅವಧಿಯಲ್ಲಿ ಪ್ರೇಕ್ಷಕರು ಬ್ಯಾಂಕಾಕ್, ಪಟ್ಟಾಯ, ಭಾರತ ಎಂದೆಲ್ಲ ಓಡಾಡುತ್ತಾರೆ! ನಿರೂಪಣೆ ಇನ್ನೊಂದಷ್ಟು ಬಿಗಿಯಾಗಿದ್ದರೆ ‘ಮಾಸ್ಟರ್ ಮೈಂಡ್’ ಖಂಡಿತವಾಗಿಯೂ ‘ಗಮನ ಸೆಳೆಯುವ ಆ್ಯಕ್ಷನ್ ಸಿನಿಮಾ’ಗಳ ಸಾಲಿಗೆ ಸೇರಿ ಬಿಡುತ್ತಿತ್ತು.
ಕುಮಾರ್ ಗೋವಿಂದ್ ಅವರ ಕೈಚ ಳಕ ಕಾಣುವುದು– ಕಥೆಯನ್ನು ಹೇಳುವ ಹೊಸತನದಲ್ಲಿ. ನಿರ್ಮಾಣ ಕಂಪೆನಿಯಲ್ಲಿ ಆರ್ಕಿಟೆಕ್ಟ್ ಆಗಿರುವ ರಾಜ್, ಪತ್ನಿ ಅನು ಜತೆಗೆ ಬ್ಯಾಂಕಾಕ್‌ಗೆ ಬಂದಾಗ ದುಷ್ಟರು ಆಕೆಯನ್ನು ಅಪಹರಿ ಸುತ್ತಾರೆ. ನಿಗೂಢ ಮನೆ ಯೊಂದರಲ್ಲಿ ಮೂರು ವರ್ಷಗಳ ಕಾಲ ರಾಜ್‌ನನ್ನು ಕೂಡಿ ಹಾಕಿ, ಮಾನಸಿಕ ಹಿಂಸೆ ಕೊಡು ತ್ತಾರೆ. ಆ ಹಿಂಸೆ ಯಾಕೆಂಬುದು ಚಿತ್ರ ಮುಂದೆ ಸಾಗಿದಂತೆಲ್ಲ ಪ್ರೇಕ್ಷಕನಿಗೆ ಅರ್ಥ ವಾಗುತ್ತ ಹೋಗುತ್ತದೆ. ಅಪಹರಣ ಕಾರರನ್ನು ಹುಡುಕಿಕೊಂಡು ಥಾಯ್ಲೆಂಡಿ ನಲ್ಲಿ ಅಲೆಯುವ ರಾಜ್, ಅದರಲ್ಲಿ ಸಫಲನೂ ಆಗುತ್ತಾನೆ. ಶೀರ್ಷಿಕೆ ಜತೆಗೆ ಇರುವ ‘ಗೆೇಮ್ ಆಫ್ ಡೆತ್’ ಎಂಬ ಅಡಿ ಬರಹ ದಂತೆ, ರಾಜ್ ಅಥವಾ ಆತನನ್ನು ಹಿಂಸಿ ಸುವ ದುಷ್ಟನ ಪೈಕಿ ಸಾವಿನ ಆಟದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಸಸ್ಪೆನ್ಸ್!
ಥ್ರಿಲ್ಲರ್ ಸಿನಿಮಾದಲ್ಲಿ ಇರಬೇಕಾದ ಅಂಶಗಳು ‘ಮಾಸ್ಟರ್ ಮೈಂಡ್’ನಲ್ಲಿ ಸಾಕಷ್ಟಿವೆ. ಬಾಲಿವುಡ್‌ನ ಸುನೀಲ್ ಶೆಟ್ಟಿಯಂತೆಯೇ ಕಾಣುವ ರಾಜವರ್ಧನ್ ಸಿನಿಮಾವನ್ನು ಆವರಿಸಿಕೊಳ್ಳುತ್ತಾರೆ. ಅವರ ಹುರಿಗಟ್ಟಿದ ದೇಹ, ಕುಂಗ್ ಫು, ಹೊಡೆದಾಟ ಗಮನ ಸೆಳೆಯುವಂತಿವೆ. ಮಧ್ಯಂತರದ ಬಳಿಕ ಬರುವ ಕುಮಾರ್ ಗೋವಿಂದ್ ಪಾತ್ರ ಕೂಡ ತುಸು ಗಟ್ಟಿತನದ್ದೇ. ಟ್ಯಾಕ್ಸಿ ಚಾಲಕಿಯಾಗಿ ಕಾಣಿಸಿಕೊಳ್ಳುವ ತಮನ್ನಾ ಹೊರತು ಪಡಿಸಿದರೆ ಉಳಿದಿಬ್ಬರಿಗೆ (ದಿವ್ಯಾ ಗೌಡ, ಭಕ್ತಿ) ಹೆಚ್ಚೇನೂ ಕೆಲಸವಿಲ್ಲ. ಮುಂದೇ ನಾಗುತ್ತದೆ ಎಂಬ ಕುತೂಹಲ ಮೂಡುತ್ತಲೇ ಹಾಡುಗಳು (ಸಂಗೀತ: ಎಂ.ಫಜಿಲ್) ಅಡ್ಡ ಬಂದು ನಿರಾಶೆ ಮೂಡಿಸಿಬಿಡುತ್ತವೆ. ಗಗನಚುಂಬಿ ಕಟ್ಟಡಗಳ ಜತೆ ಬ್ಯಾಂಕಾಕ್‌ನಲ್ಲಿ ಏನೆಲ್ಲಾ ಇದೆ ಎಂಬುದನ್ನು ಎ.ಸಿ.ಮಹೇಂದರ್ ಕ್ಯಾಮೆರಾ ತೋರಿಸಿ ಕೊಟ್ಟಿದೆ.
ಕತೆಯನ್ನು ಮಾಮೂಲಿ ಶೈಲಿಗಿಂತ ಒಂದಷ್ಟು ಭಿನ್ನ ದಾರಿಯಲ್ಲಿ ಹೊರಳಿಸಿ, ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚುವಂತೆ ಮಾಡಲು ಕುಮಾರ್ ಗೋವಿಂದ್ ಪ್ರಯತ್ನಿಸಿದ್ದಾರೆ. ಸಿನಿಮಾಗಳಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಮಚ್ಚು–ಲಾಂಗುಗಳ ಹೊಡೆತ ನೋಡಿ ನೋಡಿ ಬೇಸತ್ತ ಪ್ರೇಕ್ಷ ಕರಿಗೆ, ಮೈನವಿರೇಳಿಸುವ ಸಾಹಸ ದೃಶ್ಯಗ ಳೊಂದಿಗೆ ಥ್ರಿಲ್ಲಿಂಗ್‌ನ ಅನುಭವವನ್ನು ಸಹ ಈ ಚಿತ್ರ ಕೊಡುತ್ತದೆ.