ಮನೋರಂಜನೆ

ಮುಗ್ಗರಿಸಿದ ಲಂಕಾ : ದಾಖಲೆ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಸೆಮಿಫೈನಲ್ಸ್‌ಗೆ

Pinterest LinkedIn Tumblr

Semifinal

ಸಿಡ್ನಿ, ಮಾ.18: ಮಹತ್ವದ ವಿಶ್ವಕಪ್ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಶ್ರೀಲಂಕಾ ಮುಗ್ಗರಿಸಿದ್ದು , ದಕ್ಷಿಣ ಆಫ್ರಿಕಾ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ಸ್ ತಲುಪಿದೆ. ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ಇಂದು ಅಮೋಘ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ಜೋಕರ್ಸ್ಸ ಎಂಬ ಹಣೆಪಟ್ಟಿಯನ್ನು ಕಳಚಿಕೊಂಡು ಚಾಂಪಿಯನ್ಸ್ ಮಾದರಿ ಆರ್ಭಟಿಸಿ ಅರ್ಹ ಗೆಲುವು ದಾಖಲಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಆರಂಭದಲ್ಲೇ ತಡಬಡಾಯಿಸಿತು. ಭರ್ಜರಿ ಜೋಡಿ ಎಂದೇ ಬಿಂಬಿತವಾಗಿದ್ದ ದಿಲ್ಷನ್ ಮತ್ತು ಪೆರೇರಾ ಜೋಡಿ ಇಂದು ವಿಫಲರಾಗಿ ಕೇವಲ ಮೂರು ರನ್ ಗಳಿಸುವಷ್ಟರಲ್ಲೇ ಜೋಡಿ ಮುರಿದು ಹೋಯಿತು.

ಪಂದ್ಯದ ಎರಡನೆ ಓವರ್‌ನಲ್ಲೇ ವೇಗಿ ಅಬಾರ್ಟ್ ಅವರ ಬೌಲಿಂಗ್‌ನಲ್ಲಿ ಔಟಾಗಿ ನಿರಾಸೆಯಿಂದಲೇ ಪೆವಿಲಿಯನ್ ಸೇರಿದ ನಂತರ ಬಂದ ಸಂಗಕ್ಕರ ಕೂಡ ಒತ್ತಡಕ್ಕೆ ಸಿಲುಕಿದಂತೆ ಕಂಡು ಬಂದರು.

ಇದೇ ವೇಳೆ ಸ್ಟೇನ್ ಅವರ ಬೌಲಿಂಗ್‌ನಲ್ಲಿ ಸ್ಫೋಟಕ ಬ್ಯಾಟ್ಸ್‌ಮೆನ್ ಅವರು ದಿಲ್ಷನ್ ಶೂನ್ಯಕ್ಕೆ ಔಟಾಗಿದ್ದು , 4 ರನ್ ಗಳಾಗುವಷ್ಟರಲ್ಲೇ ಪ್ರಮುಖ 2 ವಿಕೆಟ್‌ಗಳು ಕಳೆದುಕೊಂಡ ಲಂಕಾಗೆ ಬಲವಾದ ಪೆಟ್ಟು ಬಿದ್ದಂತಾಯಿತು. 4ನೆ ಕ್ರಮಾಂಕದಲ್ಲಿ ಬಂದಂತಹ ತಿರುಮಾನೆ ಅವರು ಸಂಗಕ್ಕರ ಜತೆಗೂಡಿ ತಂಡವನ್ನು ಅಪಾಯದಿಂದ ಪಾರು ಮಾಡಲು ಹೆಣಗಾಡಿದರು.

ನಂತರ ಜೋಡಿ ಆಟ ಫಲ ನೀಡುತ್ತಿದೆ ಎನ್ನುವಷ್ಟರಲ್ಲೇ 20ನೆ ಓವರ್‌ನಲ್ಲಿ (41) ಔಟಾಗಿ ನಿರಾಸೆ ಮೂಡಿಸಿದರು. ವಿಶ್ವಕಪ್‌ನ ಮಹತ್ವದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವೇಗಿ ತಹೀರ್ ಗಮನ ಸೆಳೆದರು. ನಂತರ ಬಂದಂತಹ ಜಯವರ್ದನೆ(4) ಕೂಡ ಮತ್ತೆ ವಿಫಲತೆ ಅನುಭವಿಸಿ ತಹೀರ್ ಬೌಲಿಂಗ್‌ನಲ್ಲೇ ಔಟಾದಾಗ ಲಂಕಾ ತೀವ್ರ ಒತ್ತಡಕ್ಕೆ ಸಿಲುಕಿದಂತೆ ಕಂಡು ಬಂತು. ಇಂತಹ ಪರಿಸ್ಥಿತಿಯಲ್ಲಿ ಬಂದಂತಹ ನಾಯಕ ಮ್ಯಾಥೀವ್ಸ್ ತಂಡವನ್ನು ಅಪಾಯದಿಂದ ಪಾರು ಮಾಡಲು ಮುಂದಾದರೂ ಅದಕ್ಕೆ ದಕ್ಷಿಣ ಆಫ್ರಿಕಾ ಬೌಲರ್‌ಗಳು ಅವಕಾಶ ನೀಡಲಿಲ್ಲ. ಹಾಗೂ ಹೀಗೂ ಮಾಡಿ ನೂರರ ಗಡಿ ದಾಟಿಸಿದ ಸಂಗಕ್ಕರ (41) ಕೂಡ ಮಾರ್ಕೆಲ್ ಅವರ ಬೌಲಿಂಗ್‌ನಲ್ಲಿ ಔಟಾದಾಗ ಲಂಕಾ ಪಾಳಯದಲ್ಲಿ ಮತ್ತಷ್ಟು ಆತಂಕದ ಛಾಯೆ ಶುರುವಾಯಿತು. ಇದರ ಲಾಭವನ್ನು ಪಡೆದ ದಕ್ಷಿಣ ಆಫ್ರಿಕಾ ನಾಯಕ ಡಿ.ವಿಲಿಯರ್ಸ್ೌ ಮತ್ತಷ್ಟು ಆಕ್ರಮಣಕಾರಿ ಬೌಲಿಂಗ್‌ಗೆ ಮುಂದಾದರು. ತಂಡದ ಮೊತ್ತ 114 ರನ್‌ಗಳಾಗಿದ್ದಾಗ ಮ್ಯಾಥೀವ್ ಕೂಡ ಔಟಾದರು. ಇದಾದ ಬಳಿಕ ಹಿಂದೆ ಮುಂದೆ ನೋಡದಂತೆ ಲಂಕಾ ಬ್ಯಾಟ್ಸ್‌ಮೆನ್‌ಗಳು ಪೆವಿಲಿಯನ್ ಪೆರೇಡ್ ನಡೆಸಿದರು.

ಇಮ್ರಾನ್ ತಹೀರ್ , ವೇಗ ಮತ್ತು ಡುಮಿನಿ ಅವರ ಸ್ಪಿನ್ ದಾಳಿಗೆ ಲಂಕಾದ ಬಾಲಂಗೋಚಿಗಳು ತರಗೆಲೆಗಳಾಗಿ ಉದುರಿ ಹೋದರು. 37.2 ಓವರ್‌ಗಳಲ್ಲೇ 133 ರನ್ ಕಲೆ ಹಾಕುವಷ್ಟರಲ್ಲಿ ಲಂಕಾ ಸಂಪೂರ್ಣ ಆಲ್ ಔಟಾಯಿತು. ಅಂತಿಮ ಕ್ಷಣದಲ್ಲಿ 18 ರನ್ ಕಲೆ ಹಾಕುವಷ್ಟರಲ್ಲೇ ಮಾಸ್ಟರ್ ಬ್ಲಾಸ್ಟರ್ ಎಂದು ಹೆಸರು ಪಡೆದಿದ್ದ ತಿಶಾರಾ ಪರೇರಾ (0), ಕುಲಶೇಖರ (1) , ಕೌಶಲ್ (0), ಮಲಿಂಗ (3) ವಿಕೆಟ್‌ಗಳು ಪತನಗೊಂಡಿತ್ತು. ದಕ್ಷಿಣ ಆಫ್ರಿಕಾ ಪರವಾಗಿ ಇಮ್ರಾನ್ ತಹೀರ್ 4 ವಿಕೆಟ್ ಪಡೆದು ಗಮನ ಸೆಳೆದರೆ, ಡುಮಿನಿ 3 ವಿಕೆಟ್ ಪಡೆದು ಮಿಂಚಿದರು. ಸ್ಟೇನ್, ಅಬೌಟ್ ಮತ್ತು ಮಾರ್ಕಲ್ ತಲಾ ಒಂದು ವಿಕೆಟ್ ಪಡೆದರು. ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಭರ್ಜರಿ ಆರಂಭ ಕಂಡಿತು. ಆಮ್ಲ ಮತ್ತು ಕಾಕ್ ಜೋಡಿ ಲಂಕಾ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ಆದರೆ ಮಲಿಂಗ ಎಸೆದ 7ನೆ ಓವರ್‌ನಲ್ಲಿ ಸ್ಫೋಟಕ ಬ್ಯಾಟ್ಸ್‌ಮೆನ್ ಆಮ್ಲ ಔಟಾದರು. 40 ರನ್‌ಗೆ ದಕ್ಷಿಣ ಆಫ್ರಿಕಾದ ಪ್ರಥಮ ವಿಕೆಟ್ ಪತನ ಗೊಂಡಿತು. ನಂತರ ಬಂದ ಡಿ ವಿಲಿಯರ್ಸ್್ ಎಚ್ಚರಿಕೆ ಆಟ ಪ್ರದರ್ಶಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.

ಸ್ಕೋರ್ :
ಶ್ರೀಲಂಕಾ – 133 (37.2 ov)
ದಕ್ಷಿಣ ಆಫ್ರಿಕಾ- 134/1 (18.0 ov)

Write A Comment