ಕನ್ನಡ ಚಿತ್ರೋದ್ಯಮದ ಅಪರೂಪದ ಕಾಮಿಡಿ ನಟ ಕೋಮಲ್. ಇಪ್ಪತ್ತು ವರ್ಷಗಳ ಸಿನಿಮಾ ಜರ್ನಿಯಲ್ಲಿ, ಅವರು ಸಾಕಷ್ಟು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದೇ ಮೊದಲ ಬಾರಿಗೆ ಇವರು, ಸೂಪರ್ ಸ್ಟಾರ್ ರಜನೀಕಾಂತ್ ಅನುಕರಣೆ ಮಾಡುವಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕೋಮಲ್ ತಮಿಳು ಚಿತ್ರೋದ್ಯಮದತ್ತ ಮುಖ ಮಾಡಿರುವ ಸುದ್ದಿಯನ್ನೂ ಈಗಾಗಲೇ ನೀವು ಓದಿದ್ದೀರಿ. ಆ ತಮಿಳು ಚಿತ್ರದಲ್ಲೇ ಇವರು ರಜನೀಕಾಂತ್ ಸ್ಟೈಲ್‌ನಲ್ಲಿ ಡೈಲಾಗ್ ಹೊಡೆಯಲಿದ್ದಾರೆ. ಈಗಾಗಲೇ ಸಿನಿಮಾದ ಫೋಟೋ ಶೂಟ್ ನಡೆದಿದೆ. ಚಿತ್ರೀಕರಣವಷ್ಟೇ ಬಾಕಿ.
ಸದ್ಯ ಕನ್ನಡದ ಎರಡು ಸಿನಿಮಾಗಳ ಶೂಟಿಂಗ್‌ನಲ್ಲಿ ಬಿಝಿ ಆಗಿರುವ ಕೋಮಲ್, ಈ ಚಿತ್ರೀಕರಣವನ್ನು ಮುಗಿಸಿಕೊಂಡು ತಮಿಳಿಗೆ ಹಾರಲಿದ್ದಾರೆ. ಅಲ್ಲಿಯೂ ಕೂಡ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರಂತೆ.