ಮುಂಬೈ: ಶಾರ್ಟ್ ಸರ್ಕಿಟ್ ನಿಂದಾಗಿ ಮನೆಯ ಏರ್ ಕಂಡೀಷನ್ ನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿಯೇ ಇಡೀ ಮನೆಗೆ ಆವರಿಸಿಕೊಂಡ ಕಾರಣ ಎಚ್ಚೆತ್ತು ತಕ್ಷಣವೇ ಹೊರಗೋಡಿ ಬಂದ ಬಾಲಿವುಡ್ ನಟಿ ಮತ್ತವರ ಕುಟುಂಬ ಆಪಾಯದಿಂದ ಪಾರಾಗಿದೆ.
ಮುಂಬೈನ ಪ್ರತಿಷ್ಟಿತ ಆಂಧೇರಿಯಲ್ಲಿರುವ ರೂಯಾ ಪಾರ್ಕ್ ಅಪಾರ್ಟ್ಮೆಂಟಿನಲ್ಲಿರುವ ಬಾಲಿವುಡ್ ನಟಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ಮೂನ್ ಮೂನ್ ಸೇನ್ ಅವರ ಬಂಗಲೆಯಲ್ಲಿ ಈ ಬೆಂಕಿ ಕಾಣಿಸಿಕೊಂಡಿದ್ದು, ಈ ವೇಳೆ ಅವರ ಪುತ್ರಿ ರಿಯಾ ಸೇನ್ ಸಹ ಮನೆಯಲ್ಲಿದ್ದರು.
ಕ್ಷಣಾರ್ಧದಲ್ಲೇ ಬೆಂಕಿ ಇಡೀ ಮನೆಯನ್ನು ಆವರಿಸಿಕೊಂಡಿದ್ದು, ಮನೆಯಲ್ಲಿದ್ದವರೆಲ್ಲರೂ ಹೊರಗೋಡಿ ಬಂದ ಕಾರಣ ಯಾವುದೇ ಆಪಾಯ ಸಂಭವಿಸಿಲ್ಲ. ಆಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಷ್ಟರಲ್ಲೇ ಬೆಲೆ ಬಾಳುವ ಆನೇಕ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕರಕಲಾಗಿವೆ.
ಮೂನ್ ಮೂನ್ ಸೇನ್ ಕನ್ನಡದ ‘ಯುಗಪುರುಷ’ ಚಿತ್ರದಲ್ಲಿ ರವಿಚಂದ್ರನ್ ಅವರೊಂದಿಗೆ ಈ ಹಿಂದೆ ನಟಿಸಿದ್ದು, ಅವರ ಪುತ್ರಿ ರಿಯಾ ಸೇನ್ ಬಾಲಿವುಡ್ ಚಿತ್ರಗಳಲ್ಲದೇ ತಮಿಳಿನ ‘ತಾಜ್ ಮಹಲ್’ ಚಿತ್ರದಲ್ಲೂ ಅಭಿನಯಿಸಿದ್ದಾರೆ.