ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಕಮಲ್ ಹಾಸನ್ ಇದೀಗ ಬ್ರಾಹ್ಮಣರು ಗೋಮಾಂಸವನ್ನು ತಿನ್ನುತ್ತಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
ಗೋಹತ್ಯೆ ನಿಷೇಧದ ಮಾತನಾಡಿದ ಕಮಲ್ ಹಾಸನ್ ಗೋಹತ್ಯೆಯನ್ನು ನಿಷೇಧಿಸಿರುವುದು ಸರಿಯಲ್ಲ ಒಂದೊಮ್ಮೆ ನಿಷೇಧ ವಿಧಿಸುವುದಾದರೆ ಎಲ್ಲ ಪ್ರಾಣಿಗಳ ಹತ್ಯೆಗಳನ್ನೂ ನಿಷೇಧಿಸಲಿ. ಮಹಾವಿಷ್ಣು ಮತ್ಸ್ಯಾವತಾರ ತಾಳಿದ ಕಾರಣ ಅದರ ಹತ್ಯೆಯನ್ನೂ ನಿಷೇಧಿಸಿ ಎಂಬ ವ್ಯಾಖ್ಯಾನ ನೀಡಿದ್ದಾರೆ.
ಅಲ್ಲದೇ ಗೋವಿನಂತೆ ಮೀನು ಸಹ ಪವಿತ್ರವಾಗಿದ್ದು ನಮ್ಮ ದೇಶದ ಕೆಲವು ಪ್ರದೇಶಗಳಲ್ಲಿ ಬ್ರಾಹ್ಮಣರು ಸಹ ಮೀನನ್ನು ತಿನ್ನುತ್ತಾರೆ. ಅಷ್ಟೇ ಅಲ್ಲ, ಕೆಲವು ಶತಮಾನಗಳ ಹಿಂದೆ ಬ್ರಾಹ್ಮಣರು ಗೋಮಾಂಸವನ್ನು ತಿನ್ನುತ್ತಿದ್ದರು ಎಂದು ಪುರಾಣ ಗ್ರಂಥಗಳಲ್ಲಿ ಇದೆ. ಮಾಂಸಾಹಾರ, ಶಾಖಾಹಾರ ಅದು ಅವರರವರ ವೈಯಕ್ತಿಕವಾಗಿದ್ದು ಆ ಬಗೆಗೆ ಚಿಂತನೆ ನಡೆಸಬೇಕಿದೆ ಎಂದು ತಿಳಿಸಿದ್ದಾರೆ.