ಮನೋರಂಜನೆ

ಸನ್‌ರೈಸರ್ಸ್‌ಜಯಭೇರಿ; ಮಿಂಚಿದ ವಾರ್ನರ್, ಕುಮಾರದ್ವಯರ ಕೈಚಳಕ

Pinterest LinkedIn Tumblr

pvec23xipl

ವಿಶಾಖಪಟ್ಟಣ:
ಮುಖ್ಯಾಂಶಗಳು
*ಒಂಬತ್ತು ರನ್ನುಗಳಿಂದ ಶತಕವಂಚಿತ ವಾರ್ನರ್
*ಪ್ರವೀಣ್‌–ಭುವನೇಶ್ವರ  ಶಿಸ್ತುಬದ್ಧ ಬೌಲಿಂಗ್
*ಮನೀಷ್‌ ಪಾಂಡೆ ದಿಟ್ಟ ಹೋರಾಟ

ಬುಧವಾರ ಸಂಜೆ ಮಳೆ ಸುರಿಯುವ ಮುನ್ನ ಭರ್ಜರಿ ಬೌಂಡರಿ, ಸಿಕ್ಸರ್‌ಗಳನ್ನು ಸಿಡಿಸಿದ  ಡೇವಿಡ್ ವಾರ್ನರ್ ಬ್ಯಾಟಿಂಗ್‌ನಿಂದ ಐಪಿಎಲ್‌ ಟೂರ್ನಿಯ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವು 16 ರನ್ನುಗಳಿಂದ ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ ಜಯಿಸಿತು.

‌ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್‌  20 ಓವರುಗಳಲ್ಲಿ  4 ವಿಕೆಟ್‌ಗೆ 176 ರನ್ನುಗಳನ್ನು ಗಳಿಸಿತ್ತು. ನಂತರ ಮಳೆ ಸುರಿದ ಕಾರಣ ಡಕ್ವರ್ಥ ಲೂಯಿಸ್ ನಿಯಮದ ಅನ್ವಯ ಕೋಲ್ಕತ್ತ ತಂಡಕ್ಕೆ 12 ಓವರುಗಳಲ್ಲಿ 118 ರನ್ನುಗಳ ಗುರಿಯನ್ನು ನೀಡಲಾಗಿತ್ತು. ತಂಡವು 4 ವಿಕೆಟ್‌ ಗಳಿಸಿ 101 ರನ್ನು ಮಾತ್ರ ಗಳಿಸಿತು.

ಟಾಸ್‌ ಗೆದ್ದು ಫೀಲ್ಡಿಂಗ್ ಮಾಡಿದ ನೈಟ್‌ ರೈಡರ್ಸ್ ಲೆಕ್ಕಾಚಾರವನ್ನು ಹೈದ ರಾಬಾದ್ ಆರಂಭಿಕ ಜೋಡಿ ಶಿಖರ್ ಧವನ್ ಮತ್ತು ಡೇವಿಡ್ ವಾರ್ನರ್ ಅವರು ಬುಡಮೇಲು ಮಾಡಿದರು.

ಮೊದಲ ವಿಕೆಟ್‌ಗೆ 130 (76 ಎಸೆತ) ರನ್ನುಗಳು ಸೇರಿದವು. ನಾಯಕ ವಾರ್ನರ್ ಕೋಲ್ಕತ್ತ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದರು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ಉಮೇಶ್ ಯಾದವ್, ಪಿಯೂಷ್ ಚಾವ್ಲಾ ಬೌಲಿಂಗ್‌ನಲ್ಲಿಯೇ ಹೆಚ್ಚು ರನ್ನುಗಳನ್ನು ಗಳಿಸಿದರು.  ವಾರ್ನರ್ ಒಂಬತ್ತು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳು ಇದ್ದ 91 ರನ್ನುಗಳನ್ನು ಕೇವಲ 55 ಎಸೆತಗಳಲ್ಲಿ ಗಳಿಸಿದರು. ಶತಕದತ್ತ ಸಾಗಿದ್ದ ಅವರು ರಸೆಲ್ ಎಸೆತ ವನ್ನು ಹೊಡೆಯುವ ಯತ್ನದಲ್ಲಿ  ಬೋಥಾ ಅವರಿಗೆ ಕ್ಯಾಚ್‌ ಆದರು.

ಅರ್ಧಶತಕ ಗಳಿಸಿದ (54; 46ಎ. 4ಬೌಂ, 1ಸಿ) ಶಿಖರ್ ಧವನ್ ಕೂಡ ಮಾರ್ನ್ ಮಾರ್ಕೆಲ್ ಬೌಲಿಂಗ್‌ನಲ್ಲಿ  ರಾಬಿನ್ ಉತ್ತಪ್ಪಗೆ ಕ್ಯಾಚ್ ಆದರು. ನಂತರ ನಮನ್ ಓಜಾ (18; 8ಎ, 1ಬೌಂ, 2ಸಿ) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಉಳಿದವರು ಹೆಚ್ಚು ಹೊತ್ತು ನಿಲ್ಲಲಿಲ್ಲ.

ಕುಮಾರದ್ವಯರ ಆಟ: ಕೋಲ್ಕತ್ತ ಇನಿಂಗ್ಸ್ ಆರಂಭಿಸುವ ಮುನ್ನವೇ ಮಳೆ ಬಂದ ಕಾರಣ ಆಟವನ್ನು ಕೆಲಕಾಲ ಸ್ಥಗಿತಗೊಳಿಸಲಾಯಿತು.

ಈ ಗುರಿಯನ್ನು ಸುಲಭವಾಗಿ ಮುಟ್ಟುವತ್ತ ಕೋಲ್ಕತ್ತ ತಂಡವು ಮುನ್ನುಗ್ಗಿತ್ತು. ಆದರೆ, ಹೈದರಾಬಾದ್ ತಂಡದ ಪ್ರವೀಣ್‌ (2–0–18–1) ಮತ್ತು  ಭುವನೇಶ್ವರ್‌  (3–0–24–1) ಕೋಲ್ಕತ್ತ ತಂಡವನ್ನು ನಿಯಂತ್ರಿಸಿದರು.

ಕೆಕೆಆರ್ ತಂಡಕ್ಕೆ ಗೆಲ್ಲಲು ಕೊನೆಯ ಓವರ್‌ನಲ್ಲಿ 25 ರನ್ನುಗಳ ಅಗತ್ಯ ಇತ್ತು. ಭುವನೇಶ್ವರ್ ಕುಮಾರ್ ಆ ಓವರ್‌ನಲ್ಲಿ ಕೇವಲ ಏಳು ರನ್ನುಗಳನ್ನು ಮಾತ್ರ ನೀಡಿದರು. 11ನೇ ಓವರ್ ಬೌಲಿಂಗ್ ಮಾಡಿದ್ದ ಪ್ರವೀಣ್‌ ಕುಮಾರ್ ಐದು ರನ್ ಮಾತ್ರ ಕೊಟ್ಟಿದ್ದರು. ಇದರಿಂದ ಸನ್‌ರೈಸರ್ಸ್‌ಗೆ ಗೆಲುವು ಸಾಧ್ಯವಾಯಿತು.

ಕೋಲ್ಕತ್ತ ಆರಂಭಿಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ (34; 21ಎ, 2ಬೌಂ, 2ಸಿ) ನಿರ್ಭಯವಾಗಿ ಬ್ಯಾಟ್ ಬೀಸಿದರು.  ಕೇವಲ 22 ಎಸೆತಗಳಲ್ಲಿ 35 ರನ್ನುಗಳು ಸ್ಕೋರ್‌ಬೋರ್ಡ್‌ನಲ್ಲಿ ಮಿಂಚಿದವು.  ಗೌತಮ್ ಗಂಭೀರ್ (4 ರನ್) ಅವರನ್ನು ಪ್ರವೀಣ್‌ ಕುಮಾರ್ ಕ್ಲೀನ್ ಬೌಲ್ಡ್ ಮಾಡಿದರು. ಆ್ಯಂಡ್ರೆ ರಸೆಲ್ ಬಿರುಸಿನ 19 (10ಎ) ರನ್ನುಗಳನ್ನು ಗಳಿಸಿದ್ದಾಗ ಬೋಪಾರ ಬೌಲಿಂಗ್‌ನಲ್ಲಿ ಔಟಾದರು.

ಯೂಸುಫ್ ಪಠಾಣ್ ಅವರನ್ನು ಭುವನೇಶ್ವರ್ ಕುಮಾರ್ ಹೆಚ್ಚು ಹೊತ್ತು ನಿಲ್ಲಲು ಬಿಡಲಿಲ್ಲ.  ಆದರೆ, ಇನ್ನೊಂದೆಡೆ ಮನೀಷ್‌ (ಔಟಾಗದೆ  33) ದಿಟ್ಟ ಆಟ ವಾಡಿದರು. ಎರಡು ಆಕರ್ಷಕ ಸಿಕ್ಸರ್ ಸಿಡಿ ಸಿದರು.  ಆದರೆ, ತಂಡವನ್ನು ಗುರಿ ಮುಟ್ಟಿಸಲು ಸಾಧ್ಯವಾಗಲಿಲ್ಲ.

ಸ್ಕೋರ್ ಕಾರ್ಡ್

ಸನ್‌ರೈಸರ್ಸ್‌ ಹೈದರಾಬಾದ್‌ 4ಕ್ಕೆ 176 (20 ಓವರ್‌)

ಶಿಖರ್ ಧವನ್ ಸಿ ಬೋಥಾ ಬಿ ಆ್ಯಂಡ್ರೆ ರಸೆಲ್  54
ಡೇವಿಡ್ ವಾರ್ನರ್ ಸಿ ರಾಬಿನ್ ಉತ್ತಪ್ಪ ಬಿ ಮಾರ್ನ್ ಮಾರ್ಕೆಲ್   91
ರವಿ ಬೋಪಾರ ಸಿ ಬೋಥಾ ಬಿ ಮಾರ್ನ್ ಮಾರ್ಕೆಲ್  02
ನಮನ್ ಓಜಾ ಬಿ ಉಮೇಶ್ ಯಾದವ್  18
ಮೊಸೆಸ್ ಹೆನ್ರಿಕ್ಸ್ ಔಟಾಗದೆ  07
ಕೆ.ಎಲ್. ರಾಹುಲ್ ಔಟಾಗದೆ  00

ಇತರೆ: (ಬೈ–1, ಲೆಗ್‌ ಬೈ–1, ವೈಡ್‌–1, ನೋ ಬಾಲ್‌್–1)  04

ವಿಕೆಟ್ ಪತನ: 1–130 (ವಾರ್ನರ್; 14.2), 2–143 (ಬೋಪಾರಾ; 16,1), 3–162 (ಧವನ್; 18.3), 4–170 (ಓಜಾ; 19.2)
ಬೌಲಿಂಗ್‌: ಜೋಹಾನ್ ಬೋಥಾ 4–0–26–0 (ವೈಡ್ 1), ಮಾರ್ನ್ ಮಾರ್ಕೆಲ್ 4–0–31–2, ಸುನಿಲ್ ನಾರಾಯಣ್ 4–0–38–0, ಯೂಸುಫ್ ಪಠಾಣ್ 2–0–18–0, ಉಮೇಶ್ ಯಾದವ್ 4–0–41–1 (ನೋಬಾಲ್ 1), ಪಿಯೂಷ್ ಚಾವ್ಲಾ 1–0–15–0, ಆ್ಯಂಡ್ರೆ ರಸೆಲ್ 1–0–6–1

ಕೋಲ್ಕತ್ತ ನೈಟ್‌ ರೈಡರ್ಸ್ 4ಕ್ಕೆ 101 (12 ಓವರ್‌)
ರಾಬಿನ್ ಉತ್ತಪ್ಪ ಸಿ ಪ್ರವೀಣ್‌ ಕುಮಾರ್ ಬಿ ಹೆನ್ರಿಕ್ಸ್  34
ಗೌತಮ್ ಗಂಭೀರ್ ಬಿ ಪ್ರವೀಣ್‌ ಕುಮಾರ್  04
ಮನೀಷ್‌ ಪಾಂಡೆ ಔಟಾಗದೇ  33
ಆ್ಯಂಡ್ರೆ ರಸೆಲ್ ಸಿ ಡೇಲ್  ಸ್ಟೇಯ್ನ್ ಬಿ ರವಿ ಬೋಪಾರ  19
ಯೂಸುಫ್ ಪಠಾಣ್ ಸಿ ಕರ್ಣ್ ಶರ್ಮಾ ಬಿ ಭುವನೇಶ್ವರ ಕುಮಾರ್  06
ಸೂರ್ಯಕುಮಾರ್ ಯಾದವ್ ಔಟಾಗದೆ  02

ಇತರೆ: (ಬೈ–1, ಲೆಗ್‌ ಬೈ–1, ವೈಡ್‌–1, ನೋ ಬಾಲ್‌್–1)  04

ವಿಕೆಟ್ ಪತನ: 1–35 (ಗಂಭೀರ್; 3.4), 2–49 (ಉತ್ತಪ್ಪ; 5.5),  3-80 (ರಸೆಲ್; 8.5), 4–94 (ಪಠಾಣ್; 11.2)
ಬೌಲಿಂಗ್‌: ಡೇಲ್ ಸ್ಟೇಯ್ನ್ 3–0–24–0, ಭುವನೇಶ್ವರ ಕುಮಾರ್ 3–0–24–1 (ವೈಡ್ 1), ಪ್ರವೀಣ್‌ ಕುಮಾರ್ 2–0–18–1,  ಕರಣ್‌ ಶರ್ಮಾ 1–0–5–0, ಮೊಸೆಸ್ ಹೆನ್ರಿಕ್ಸ್ 1–0–9–1 (ವೈಡ್ 1), ವಿಪುಲ್ ಶರ್ಮಾ 1–0–14–0, ರವಿ ಬೋಪಾರ 1–0–7–1

ಫಲಿತಾಂಶ:  ಡಕ್ವರ್ಥ್‌ ಲೂಯಿಸ್‌ ನಿಯಮದ ಅನ್ವಯ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ 16 ರನ್‌ಗಳ ಜಯ.
ಪಂದ್ಯಶ್ರೇಷ್ಠ: ಡೇವಿಡ್ ವಾರ್ನರ್

Write A Comment