ಬಾಲಿವುಡ್ ನಲ್ಲಿ ತಮ್ಮ ಪ್ರತಿಭೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ನಟಿ ಕಂಗನಾ ನನಗೇನೂ ಅವಕಾಶಕ್ಕೆ ಕೊರತೆ ಇಲ್ಲ ಎನ್ನುವ ಜತೆಗೆ ಈ ಸಮಯದಲ್ಲಿ ಮದುವೆ ಬೇಕೇ ಎಂದು ಪ್ರಶ್ನಿಸಿದ್ದಾಳೆ.
ಕ್ವೀನ್ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಂತರ ನನಗೆ ಅವಕಾಶಗಳು ಹೆಚ್ಚಾಗಿದ್ದು 8 ವರ್ಷಗಳ ಸಿನಿ ಬದುಕಿನಲ್ಲಿ ನನಗೆ ಒಲಿದ ಎರಡನೇ ರಾಷ್ಟ್ರ ಪ್ರಶಸ್ತಿ ಇದು. 2006ರಲ್ಲಿ ‘ಗ್ಯಾಂಗ್ ಸ್ಟಾರ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ನಾನು ‘ಫ್ಯಾಷನ್’ ಚಿತ್ರದ ಅಭಿನಯಕ್ಕೆ ಮೊದಲ ಬಾರಿಗೆ ರಾಷ್ಟ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದೆ. ಆದರೆ ಅಂದು ನನಗೆ ಇಷ್ಟು ದೊಡ್ಡ ಪ್ರಖ್ಯಾತಿ ಸಿಕ್ಕಿರಲಿಲ್ಲ. ಆದರೆ ಈಗ ಎರಡನೇ ಪ್ರಶಸ್ತಿ ಸಿಕ್ಕಿದ ಬಳಿಕ ಸಿನಿಮಾದಲ್ಲಿ ನಟಿಸಲು ನನಗೆ ಹೆಚ್ಚಿನ ಆಫರ್‍ಗಳು ಬರುತ್ತಿದ್ದು ಸಿಕ್ಕ ಅವಕಾಶವನ್ನು ಸದುಪಯೋಗಗೊಳಿಸಿಕೊಳ್ಳುವೆ ಎಂದು ತಿಳಿಸಿದ್ದಾಳೆ.
ಉತ್ತಮ ಅವಕಾಶಗಳು ನನ್ನನ್ನುಹುಡುಕಿಕೊಂಡು ಬರುತ್ತಿರುವ ಸಮಯದಲ್ಲಿ ಮದುವೆಯ ಬಗ್ಗೆ ಯೋಚನೆಯನ್ನೂ ಮಾಡುವುದಿಲ್ಲ ಎಂದಿರುವ ಕಂಗನಾ, ಚಿತ್ರರಂಗದಲ್ಲಿರುವವರನ್ನು ಎಂದಿಗೂ ಮದುವೆಯಾಗಲಾರೆ ಏಕೆಂದರೆ ನಟರನ್ನು ಮದುವೆಯಾದರೆ ಯಶಸ್ಸಿನ ವ್ಯತ್ಯಾಸಗಳು ಬದುಕಿನಲ್ಲಿ ಬಿರುಕು ಪ್ರಾರಂಭವಾಗುತ್ತದೆ. ಹಾಗಾಗಿ ಹೀಗಾಗಿ ಮದುವೆ ಎಂಬ ಮೂರಕ್ಷರದ ಪದ ಕೇವಲ ಮೂರುದಿನಕ್ಕೆ ಮೀಸಲಾಗದಂತೆ ನೋಡಿಕೊಳ್ಳಬೇಕಾದರೆ ಸಿನಿಮಾ ಇಂಡಸ್ಟ್ರಿಯಿಂದ ಹೊರಗಿರುವವರನ್ನು ಮದುವೆಯಾಗಬೇಕು ಎಂಬುದು ತಮ್ಮ ಆಶಯ ಎಂದಿದ್ದಾಳೆ.