ಬೆಂಗಳೂರು: ಅನಾಮಧೇಯ ಮೊಬೈಲ್ ಫೋನ್ ಸಂಖ್ಯೆಯಿಂದ ಅಶ್ಲೀಲ ಸಂದೇಶಗಳು ಬಂದ ಹಿನ್ನೆಲೆಯಲ್ಲಿ ಚಲನಚಿತ್ರ ನಿರ್ದೇಶಕ ಎನ್. ಓಂಪ್ರಕಾಶ್ ರಾವ್ ಪುತ್ರಿ ನಟಿ ಶ್ರಾವ್ಯ ಅವರು ವಿಜಯನಗರ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.
ಕೆಲವು ದಿನಗಳಿಂದ ತಮ್ಮ ಮೊಬೈಲ್‍ಗೆ ಎಸ್‍ಎಂಎಸ್ ಹಾಗೂ ವ್ಯಾಟ್ಸ್ ಆ್ಯಪ್‍ಗೆ ಅನಾಮಧೇಯ ವ್ಯಕ್ತಿಯೊಬ್ಬನಿಂದ ನಿರಂತರವಾಗಿ ಅಶ್ಲೀಲ ಸಂದೇಶಗಳು ಬರುತ್ತಿವೆ. ಇದರಿಂದ ನನ್ನ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಶ್ರಾವ್ಯ ದೂರಿನಲ್ಲಿ ವಿವರಿಸಿದ್ದಾರೆ.
ಈ ದೂರು ಸ್ವೀಕರಿಸಿರುವ ವಿಜಯನಗರ ಪೊಲೀಸರು, ನಟಿ ಮೊಬೈಲ್‍ಗೆ ಸಂದೇಶ ಬಂದಿರುವ ಮೊಬೈಲ್ ಫೋನ್ ಸಂಖ್ಯೆಯ ಮೂಲಕ ಆರೋಪಿ ಪತ್ತೆಗೆ ಮುಂದಾಗಿದ್ದಾರೆ. ಅನಾಮಧೇಯ ನಂಬರ್‍ನ ಮೊಬೈಲ್ ಕರೆ ಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಟಿ ಶ್ರಾವ್ಯ, ಇತ್ತೀಚೆಗೆ ತೆರೆಕಂಡ ರೋಜ್ ಹಾಗೂ ಕಟ್ಟೆ ಸೇರಿದಂತೆ ಇನ್ನಿತರ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.