ಚಿತ್ರರಂಗದಲ್ಲಿ ತಮ್ಮ ಥಳಕು ಬಳುಕಿನ ಮೂಲಕವೇ ಖ್ಯಾತಿ ಗಳಿಸಿರುವ ಕಾಂಗ್ರೆಸ್ ನಾಯಕಿ ಖುಷ್ಬೂ ಇದೀಗ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿರುವ ಖುಷ್ಬೂ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಒಂದು ವೈಫಲ್ಯವಾಗಿದ್ದು ಅವರು ನೀಡಿದ ಎಲ್ಲ ಭರವಸೆಗಳು ಪೊಳ್ಳಾಗಿವೆ. ಅಲ್ಲದೇ ಮೋದಿ ಆಡಳಿತದಿಂದ ಬಡವರು ಹಾಗೂ ಕೃಷಿಕರು ತೀವೃ ತೊಂದರೆ ಅನುಭವಿಸುತ್ತಿದ್ದು ಬಡವರು-ಕೃಷಿಕರ ಏಳಿಗೆ ಬಗ್ಗೆ ಅವರ ಆಡಳಿತದಲ್ಲಿ ಹೆಚ್ಚಿನ ಒತ್ತು ನೀಡುವುದಾಗಿ ಮೋದಿ ಹೇಳಿದ್ದ ಮಾತನ್ನು ತಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಸಮಯದಲ್ಲಿ ತಮ್ಮ ಚಿತ್ರಜೀವನ ಬಹುತೇಕ ಅಂತ್ಯಗೊಂಡಿದೆ ಎಂದ ಖುಷ್ಬೂ ತಮ್ಮ ಮಕ್ಕಳು ಈಗ ಬೆಳೆದಿದ್ದಾರೆ. ಜತೆಗೆ ತಾವು ಈಗ ಕಾಂಗ್ರೆಸ್ನ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದು, ನಟಿಸಲು ಒಪ್ಪಿಕೊಂಡರೆ ಸಮಯಕ್ಕೆ ಸರಿಯಾಗಿ ಮುಗಿಸಲು ತೊಂದರೆ ಆಗುವುದರಿಂದ ನಿರ್ಮಾಪಕರಿಗೆ ತೊಂದರೆ ಕೊಡಲು ತಮಗಿಷ್ಟವಿಲ್ಲ. ಹಾಗಾಗಿ ತಮ್ಮ ಚಿತ್ರಜೀವನ ಬಹುತೇಕ ಅಂತ್ಯವಾಗಿದೆ ಎಂದು ತಿಳಿಸಿದ್ದಾರೆ.