ಕೋಲ್ಕತ್ತಾ,ಜೂ.5: ಟೀಂ ಇಂಡಿಯಾದ ಉತ್ತಮ ನಾಯಕನೆಂದೇ ಬಿಂಬಿಸಿಕೊಂಡಿ ರುವ ಮಹೇಂದ್ರ ಸಿಂಗ್ ಧೋನಿಯೊಂದಿಗೆ ನನ್ನನ್ನು ಹೋಲಿಸಬೇಡಿ ಎಂದು ಟೆಸ್ಟ್ ತಂಡದ ನೂತನ ನಾಯಕ ವಿರಾಟ್ ಕೊಹ್ಲಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಾಂಗ್ಲಾ ಪ್ರವಾಸಕ್ಕೂ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ವಿರಾಟ್, ನಾನು ಮಹೇಂದ್ರ ಸಿಂಗ್ ಧೋನಿಯ ಸಾರಥ್ಯದಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದೇನೆ. ಆದರೆ ಪೂರ್ಣ ಪ್ರಮಾಣದ ನಾಯಕನಾಗಿ ಬಾಂಗ್ಲಾ ಪ್ರವಾಸ ಕೈಗೊಂಡಿರುವ ನನ್ನ ಮೇಲೆ ಬಹಳಷ್ಟು ಜವಾಬ್ದಾರಿಯೂ ಇದೆ. ನನಗೆ ಸಿಕ್ಕಿರುವ ಈ ಅತ್ಯಲ್ಪ ಅವಧಿಯಲ್ಲೇ ನಾನು ಕೂಡ ಉತ್ತಮ ನಾಯಕನೆಂದು ತೋರ್ಪಡಿಸುವುದಾಗಿ ವಿರಾಟ್ ಕೊಹ್ಲಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ನನ್ನ ಹಾಗೂ ಅನುಷ್ಕಾಶರ್ಮಾ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿದರೂ ಕೂಡ ಕ್ರಿಕೆಟ್ ರಂಗದಲ್ಲಿ ನಾನು ಇಷ್ಟು ಉನ್ನತ ಮಟ್ಟಕ್ಕೇರುವಲ್ಲಿ ಅನುಷ್ಕಾರ ಪಾತ್ರವು ಅಗಾಧವಾಗಿದೆ ಎಂದರು.