ಮನೋರಂಜನೆ

ಕೊಹ್ಲಿ ನಾಯಕತ್ವದ ‘ರಹಸ್ಯ’ ಬಿಚ್ಚಿಟ್ಟ ಬಿಸಿಸಿಐ ನ ಮಾಜಿ ಸದಸ್ಯ !!

Pinterest LinkedIn Tumblr

13512Virat-Kohli-1

ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ನಾಯಕತ್ವದ ರಹಸ್ಯವನ್ನು ಬಿಸಿಸಿಐ ಆಯ್ಕೆ ಸಮಿತಿಯ ಮಾಜಿ ಸದಸ್ಯ ರಾಜಾ ವೆಂಕಟ್ ಬಿಚ್ಚಿಟ್ಟಿದ್ದು ಕುತೂಹಲ ಕೆರಳಿಸಿದೆ.

ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಆಯ್ಕೆ ಸಮಿತಿ ನಿರ್ಧಾರದಲ್ಲಿ ಮಧ್ಯ ಪ್ರವೇಶಿಸದೇ ಇದ್ದಿದ್ದರೆ ವಿರಾಟ್ ಕೊಹ್ಲಿ 3 ವರ್ಷಗಳ ಹಿಂದೆಯೇ ಭಾರತ ಏಕದಿನ ತಂಡದ ನಾಯಕರಾಗಿರುತ್ತಿದ್ದರು ಎಂದು ಬಂಗಾಳಿಯ ಪತ್ರಿಕೆಯಲ್ಲಿ ತಾವು ಬರೆದಿರುವ ಅಂಕಣದಲ್ಲಿ ತಿಳಿಸಿರುವ ರಾಜಾ ವೆಂಕಟ್ ಅವರು 2011 ರ ಅಂತ್ಯ  ಹಾಗೂ 2012 ರ ಆರಂಭದ ಅವಧಿಯಲ್ಲಿ   ಭಾರತ ಆಸ್ಟ್ರೇಲಿಯಾ  ಪ್ರವಾಸದ ಸಮಯದಲ್ಲಿ  ಆಯ್ಕೆ ಸಮಿತಿಯ ಸಾಕಷ್ಟು ಸದಸ್ಯರು ನಾಯಕತ್ವವನ್ನು ವಿರಾಟ್ ಕೊಹ್ಲಿ ಗೆ ನೀಡುವ ಚಿಂತನೆ ಹೊಂದಿದ್ದರು. ಆದರೆ ಆಗಿನ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಮಧ್ಯ ಪ್ರವೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ ಎಂದು ವಿವರಿಸಿದ್ದಾರೆ.

ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ 0  -3 ಅಂತರದ ಹಿನ್ನಡೆ  ಅನುಭವಿಸಿತ್ತು. ಆಡಿಲೇಡ್ ನಲ್ಲಿ ನಡೆ ಯಬೇಕಿದ್ದ ಅಂತಿಮ ಪಂದ್ಯಕ್ಕೂ ಮುನ್ನ ಆಯ್ಕೆ ಸಮಿತಿಯ ಇಬ್ಬರು ಸದಸ್ಯರಾದ ಮೊಹಿಂದರ್ ಅಮರ್ ನಾಥ್ ಮತ್ತು ನರೇಂದ್ರ ಹಿರ್ವಾನಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿ ತಂಡದ ಪರಿಸ್ಥಿತಿ ಗಮನಿಸಿದಾಗ ತಂಡದಲ್ಲಿ ಒಗ್ಗಟ್ಟಿನ ಕೊರತೆ ಎದ್ದುಕಾಣುತ್ತಿತ್ತು.  ಹಾಗಾಗಿ ಏಕದಿನ ಸರಣಿಗೆ  ನೂತನ ನಾಯಕನ ಆಯ್ಕೆಗೆ ಚಿಂತನೆ  ನಡೆಸಿ ಕೊಹ್ಲಿಗೆ ಆ ಸ್ಥಾನ ನೀಡುವ ಕುರಿತು ಚಿಂತನೆ ನಡೆದಿತ್ತು . ಆದರೆ ಈ ನಿರ್ಧಾರಕ್ಕೆ ಶ್ರೀನಿವಾಸನ್  ಅಡ್ಡಗಾಲಾದರು ಎಂದು ತಿಳಿಸಿದ್ದಾರೆ.

Write A Comment