ಮನೋರಂಜನೆ

ನಿರ್ದೇಶಕರ ಆರೋಪಕ್ಕೆ ನಟಿ ರಾಗಿಣಿ ನೀಡಿದ ಉತ್ತರ ಇಲ್ಲಿದೆ ನೋಡಿ

Pinterest LinkedIn Tumblr

9531Ragini-Dwivedi-Nati-Koli-issues1553

‘ನಾಟಿ ಕೋಳಿ’ ವಿವಾದ ಸದ್ಯ ಬಗೆ ಹರಿಯುವಂತೆ ಕಾಣುತ್ತಿಲ್ಲ. ನಟಿ ರಾಗಿಣಿ ಹಾಕಿದ ನಿಬಂಧನೆಗಳ ಕಾರಣಕ್ಕಾಗಿಯೇ ಅವರನ್ನು ‘ನಾಟಿ ಕೋಳಿ’ ಚಿತ್ರದಿಂದ ಕೈ ಬಿಡಬೇಕಾಯಿತು ಎಂದು ನಿರ್ದೇಶಕ ಶ್ರೀನಿವಾಸ ರಾಜು ಹೇಳಿದ ಬೆನ್ನಲ್ಲೇ ನಟಿ ರಾಗಿಣಿ ಸಾಮಾಜಿಕ ಜಾಲ ತಾಣದಲ್ಲಿ ನಿರ್ದೇಶಕರ ವಿರುದ್ದ ಕಿಡಿ ಕಾರಿದ್ದಾರೆ.

ನಟಿಯರ ಬಟ್ಟೆ ಬಿಚ್ಚಿಸಿದರೆ ಮಾತ್ರ ಚಿತ್ರ ಓಡುತ್ತದೆಂಬ ಮನೋಸ್ಥಿತಿ ಹೊಂದಿರುವ ಶ್ರೀನಿವಾಸ ರಾಜು ಅವರಂತಹ ನಿರ್ದೇಶಕರ ಬಳಿ ಕೆಲಸ ಮಾಡುವುದು ಇಷ್ಟವಾಗದ ಕಾರಣ ತಾವೇ ‘ನಾಟಿ ಕೋಳಿ’ ಗೆ ಗುಡ್ ಬೈ ಹೇಳಿರುವುದಾಗಿ ರಾಗಿಣಿ ಹೇಳಿಕೊಂಡಿದ್ದಾರೆ. ನಿರ್ದೇಶಕರಿಗೆ ವೃತ್ತಿಪರತೆಯೇ ಇಲ್ಲ ಎಂದು ಜರೆದಿರುವ ರಾಗಿಣಿ, ಚಿತ್ರ ಕಥೆ ಕುರಿತಂತೆ ಅವರಿಗೆ ಯಾವುದೇ ಸ್ಪಷ್ಟತೆ ಇಲ್ಲವೆಂದಿದ್ದಾರೆ.

ಒಬ್ಬ ನಟ ಅಥವಾ ನಟಿಗೆ ಚಿತ್ರೆದ ಕುರಿತು ತಿಳಿದುಕೊಳ್ಳುವ ಹಕ್ಕು ಇದ್ದು, ಇದನ್ನು ಕೇಳಿದ ವೇಳೆ ಅದು ತಮಗೆ ಗೊತ್ತು. ನೀವು ಸುಮ್ಮನೆ ಸೆಟ್ ಗೆ ಬನ್ನಿ ಎನ್ನುವಂತಹ ವರ್ತನೆ ತೋರಿದ ಇಂತಹ ನಿರ್ದೇಶಕರ ಬಳಿ ಕೆಲಸ ಮಾಡುವುದು ಕಷ್ಟ. ಹೀಗಾಗಿಯೇ ತಾವು ‘ನಾಟಿ ಕೋಳಿ’ ಯಿಂದ ಅಧಿಕೃತವಾಗಿ ಹೊರ ಹೋಗುತ್ತಿರುವುದಾಗಿ ರಾಗಿಣಿ ಘೋಷಿಸಿದ್ದಾರೆ.

Write A Comment