ಮನೋರಂಜನೆ

ಅಂಧ ಮಕ್ಕಳಿಗೆ ‘ರನ್ನ’ ಚಿತ್ರ ಉಚಿತ ಪ್ರದರ್ಶನ

Pinterest LinkedIn Tumblr

ranna

ಬೆಂಗಳೂರು: ‘ವಿಶ್ವ ಹೆಲನ್ ಕೆಲ್ಲರ್ ದಿನಾಚರಣೆ ಅಂಗವಾಗಿ ಐಡಿಎಲ್ ಫೌಂಡೇಶನ್ ಅಂಧ ಹಾಗೂ ಅಂಗವಿಕಲರಿಗಾಗಿ ಜೂನ್‌ 28ರಂದು ‘ರನ್ನ’ ಚಿತ್ರ ಪ್ರದರ್ಶನವನ್ನು ಉಚಿತವಾಗಿ ಏರ್ಪಡಿಸಿದೆ’ ಎಂದು ಫೌಂಡೇಷನ್‌ನ ಅಧ್ಯಕ್ಷ ಪಿ.ಕೆ.ಪಾಲ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ನಗರದ ಕೆ.ಜಿ.ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಅಂಧ ಹಾಗೂ ಅಂಗವಿಕಲರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದ್ದು, ಆಸಕ್ತರು ಭಾಗವಹಿಸಬಹುದು’ ಎಂದರು.

‘ಚಿತ್ರ ಪ್ರದರ್ಶನದಲ್ಲಿ ಭಾಗವಹಿಸಲು 1000 ಮಕ್ಕಳಿಗೆ ಅವಕಾಶವಿದೆ. ಅಂಗವಿಕಲರು ಹಾಗೂ ಅಂಧ ಮಕ್ಕಳೊಂದಿಗೆ ಪೋಷಕರು ಚಿತ್ರ ಪ್ರದರ್ಶನದಲ್ಲಿ ಭಾಗವಹಿಸಬಹುದು. ಮಕ್ಕಳೊಂದಿಗೆ ನಟ ಸುದೀಪ್‌ ಅವರು ಚಿತ್ರ ವೀಕ್ಷಿಸಲಿದ್ದಾರೆ’ ಎಂದು ಅವರು ತಿಳಿಸಿದರು. ‘ಭಾಗವಹಿಸಲು ಇಚ್ಛಿಸುವವರು 88802 68787 ಅಥವಾ 78139 88787 ಸಂಖ್ಯೆಯನ್ನು ಸಂಪರ್ಕಿಸಬೇಕು’ ಎಂದು ಅವರು ಮನವಿ ಮಾಡಿದರು.

Write A Comment