ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರಿಗೂ ವಿವಾದಕ್ಕೂ ಏನೋ ಒಂದು ನಂಟಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ತಮ್ಮ ವಿಶಿಷ್ಟ ಕ್ರಿಕೆಟ್ ಶೈಲಿಯ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗ ಜೇಮ್ಸ್ ಫಾಲ್ಕ್ ನರ್ ಇದೀಗ ಜೈಲು ಕಂಬಿ ಎಣಿಸಿದ ಘಟನೆ ನಡೆದಿದೆ.
ಹೌದು. ಕ್ರಿಕೆಟ್ ನಲ್ಲಿ ಸಾಕಷ್ಟು ಹೆಸರು, ಕೀರ್ತಿ ಗಳಿಸಿರುವ ಜೇಮ್ಸ್ ಫಾಲ್ಕ್ ನರ್ ಬ್ರಿಟನ್ನಿನ ಗ್ರೇಟರ್ ಮ್ಯಾಂಚೆಸ್ಟರ್ ನಲ್ಲಿ ಮೂರು ಬಾರಿ ಡ್ರಿಂಕ್ ಅಂಡ್ ಡ್ರೈವ್ ಮಾಡಿ ಸಿಕ್ಕಿಬಿದ್ದಿದ್ದು ಪ್ರಕತ್ರಣ ದಾಖಲಿಸಿಕೊಂಡ ಪೊಲೀಸರು ಫಾಲ್ಕ್ ನರ್ ಅವರನ್ನು ವಶಕ್ಕೆ ಪಡೆದು ಜೈಲಿಗಟ್ಟಿದ್ದರು.
ತಮ್ಮ ಕುಡಿತದ ಕಾರಣದಿಂದ ಜೈಲು ಸೇರಿದ್ದ ಫಾಲ್ಕ್ ನರ್ ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಂಚೆಸ್ಟರ್ ಕೋರ್ಟ್ ನಲ್ಲಿ ಜುಲೈ 21ರಂದು ಫಾಲ್ಕ್ ನರ್ ವಿಚಾರಣೆಗೆ ಹಾಜರಾಗುವಂತೆ ಅಲ್ಲಿನ ನ್ಯಾಯಾಲಯ ಸೂಚನೆ ನೀಡಿದೆ.