ನವದೆಹಲಿ, ಜು.14-ಐಪಿಎಲ್ ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಹಗರಣದ ಪ್ರಮುಖ ಆರೋಪಿಗಳಾಗಿದ್ದ ಗುರುನಾಥ ಮೇಯಪ್ಪನ್ ಹಾಗೂ ಉದ್ಯಮಿ ರಾಜ್‌ಕುಂದ್ರಾ ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ. ವಿಶ್ವದಾದ್ಯಂತ ಭಾರೀ ಕುತೂಹಲ ಕೆರಳಿಸಿದ್ದ ಐಪಿಎಲ್ ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್ ಹಗರಣದ ತೀರ್ಪು ನೀಡಿದ ನ್ಯಾಯಮೂರ್ತಿ ಲೋಧಾ,
ಗುರುನಾಥ ಮೇಯಪ್ಪನ್ ಹಾಗೂ ರಾಜ್‌ಕುಂದ್ರಾ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ಹೇಳಿದ್ದಾರೆ. ಬಿಸಿಸಿಐ ಸಂಸ್ಥೆಯ ಪ್ರತಿಷ್ಠೆಯನ್ನು ಹಾಳು ಮಾಡುವ ಪ್ರಕರಣ ಇದಾಗಿದ್ದು, ಕ್ರಿಕೆಟ್ ಪಂದ್ಯಾವಳಿಗಳ ಯಾವುದೇ ಚಟುವಟಿಕೆಗಳಲ್ಲಿಯೂ ಮೇಯಪ್ಪನ್ ಭಾಗವಹಿಸದಂತೆ ಆಜೀವ ನಿಷೇಧ ಹೇರಲಾಗಿದೆ. ಇದೇ ರೀತಿ ರಾಜಸ್ಥಾನ ರಾಯಲ್ಸ್ ತಂಡದ ಸಹ ನಾಯಕನಾಗಿರುವ ಉದ್ಯಮಿ ರಾಜ್‌ಕುಂದ್ರಾನಿಗೂ ಸಹ ನ್ಯಾಯಾಧೀಶರು ಆಜೀವ ನಿಷೇಧ ಹೇರಿದ್ದು ಇದೊಂದು ದೇಶದ್ರೋಹದ ಕೆಲಸವಾಗಿದೆ ಎಂದು ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ)ಗೆ ಕೂಡ ಈ ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್ ಹಗರಣದಲ್ಲಿ 2 ವರ್ಷಗಳ ನಿಷೇಧ ಹೇರಲಾಗಿದೆ. ಹಾಗೆಯೇ ಈ ವಿದ್ರೋಹದ ಸಂಚಿನ ಭಾಗಿಯಾಗಿದ್ದ ಆರ್.ಆರ್.ತಂಡಕ್ಕೂ 2 ವರ್ಷಗಳ ಕಾಲ ನಿಷೇಧವನ್ನು ವಿಧಿಸಲಾಗಿದೆ. ಐಪಿಎಲ್ ಸೀಸನ್ 6ರ ಸ್ಪಾಟ್ ಫಿಕ್ಸಿಂಗ್ ಹಗರಣದ ಭಾಗಿಗಳಾದ ಎಲ್ಲ ತಂಡಗಳಿಗೂ ನ್ಯಾಯಮೂರ್ತಿ ಎಂ.ಆರ್.ಲೋಧ ಅವರು ಈ ನಿಷೇಧ ವಿಧಿಸಿದ್ದಾರೆ. ಚೆನ್ನೈ ಸೂಪರ್‌ಕಿಂಗ್ಸ್ ತಂಡವು ಇಂಡಿಯನ್ ಸಿಮೆಂಟ್ ಮಾಲೀಕತ್ವದಲ್ಲಿದೆ. ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಶೇನ್ ವ್ಯಾಟ್ಸನ್, ಗುರುನಾಥ್ ಮೇಯಪ್ಪನ್, ಬಿಸಿಸಿಐನ ಮಾಜಿ ಮುಖ್ಯಸ್ಥ ಎನ್.ಶ್ರೀನಿವಾಸನ್ ಅಳಿಯನಾಗಿದ್ದಾರೆ. ತೀರ್ಪು ಹೊರ ಬೀಳುತ್ತಿದ್ದಂತೆಯೇ ಷೇರು ಮಾರುಕಟ್ಟೆಯಲ್ಲಿ ರಾಜಸ್ಥಾನ್ ರಾಯಲ್ಸ್‌ನ ಷೇರುಗಳು ಭಾರೀ ಕುಸಿತ ಕಂಡಿವೆ. ಚೆನ್ನೈ ಸೂಪರ್‌ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕ ಮಹೇಂದ್ರಸಿಂಗ್ ಧೋಣಿ, ಐಪಿಎಲ್ 6ನೆ ಆವೃತ್ತಿಯ ಸ್ಪಾಟ್ ಫಿಕ್ಸಿಂಗ್‌ಹಗರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ಆರ್.ಲೋಧಾ ನೇತೃತ್ವದ ತ್ರಿ ಸದಸ್ಯ ಪೀಠ ಇಂದು ತೀರ್ಪು ಹಾಗು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿತು.