ಏಕ ದಿನ ಪಂದ್ಯಗಳಲ್ಲಿ ಹಲವರು ದ್ವಿ ಶತಕ ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ 2010 ರಂದು ಗ್ವಾಲಿಯರ್ ನಲ್ಲಿ ದಕ್ಷಿಣ ಅಫ್ರಿಕಾ ವಿರುದ್ದದ ಏಕ ದಿನ ಪಂದ್ಯದಲ್ಲಿ ಮೊತ್ತ ಮೊದಲ ದ್ವಿ ಶತಕ ಗಳಿಸಿದ್ದು, ಬಳಿಕ ಸಚಿನ್ ಸೇರಿದಂತೆ ಒಟ್ಟು ಆರು ಮಂದಿ ಈವರೆಗೆ ದ್ವಿ ಶತಕ ಗಳಿಸಿದ್ದಾರೆ.
ಭಾರತದ ರೋಹಿತ್ ಶರ್ಮಾ 2014 ನವೆಂಬರ್ ನಲ್ಲಿ ಶ್ರೀಲಂಕಾ ವಿರುದ್ದ ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ 264 ಗಳಿಸಿದ್ದರು. ಮಾರ್ಚ್ 2015 ರಂದು ನ್ಯೂಜಿಲ್ಯಾಂಡಿನ ಮಾರ್ಟಿನ್ ಗುಪ್ಪಿಲ್ ವೆಸ್ಟ್ ಇಂಡೀಸ್ ವಿರುದ್ದ ವೆಲ್ಲಿಂಗ್ಟನ್ ನಲ್ಲಿ ನಡೆದ ಪಂದ್ಯದ ವೇಳೆ ಅಜೇಯ 237 ರನ್ ಗಳಿಸಿದ್ದಾರೆ.
ಭಾರತದ ವಿರೇಂದ್ರ ಸೆಹ್ವಾಗ್ 2011 ಡಿಸೆಂಬರ್ ನಲ್ಲಿ ಇಂದೋರ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ದದ ಪಂದ್ಯದಲ್ಲಿ 219 ರನ್ ಬಾರಿಸಿದ್ದರು. ವೆಸ್ಟ್ ಇಂಡೀಸಿನ ಕ್ರಿಸ್ ಗೇಯ್ಲ್ ಫೆಬ್ರವರಿ 2015 ರಂದು ಕ್ಯಾನ್ ಬೆರಾದಲ್ಲಿ ಜಿಂಬಾಬ್ವೆ ವಿರುದ್ದದ ಪಂದ್ಯದಲ್ಲಿ 215 ರನ್ ಗಳಿಸಿದ್ದರು. ನವೆಂಬರ್ 2013 ರಂದು ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಭಾರತದ ರೋಹಿತ್ ಶರ್ಮಾ 209 ರನ್ ಗಳಿಸಿದ್ದರು.
ಏಕ ದಿನ ಪಂದ್ಯದಲ್ಲಿ ದ್ವಿ ಶತಕ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆ ಭಾರತದ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದು, 2010 ರಂದು ಗ್ವಾಲಿಯರ್ ನಲ್ಲಿ ದಕ್ಷಿಣ ಅಫ್ರಿಕಾ ವಿರುದ್ದ ನಡೆದ ಪಂದ್ಯದಲ್ಲಿ ಅಜೇಯ 200 ರನ್ ಗಳಿಸಿದ್ದರು. ದ್ವಿ ಶತಕ ಗಳಿಸಿದ ಆರು ಮಂದಿ ಆಟಗಾರರ ಪೈಕಿ ನಾಲ್ಕು ಮಂದಿ ಭಾರತದವರೇ ಇರುವುದು ಹೆಮ್ಮೆಯ ಸಂಗತಿಯಾಗಿದೆ.