ಮನೋರಂಜನೆ

ಫೇಸ್‌ಬುಕ್‌ಗೆ ಎಂಟ್ರೀ ನೀಡಿದ ಗೋಲ್ಡನ್ ಸ್ಟಾರ್ ಗಣೇಶ್

Pinterest LinkedIn Tumblr

ganesh

ಬರೀ ನಟಿಮಣಿಗಳು ಫೇಸ್‌ಬುಕ್‌ನಲ್ಲಿ ಅಭಿಮಾನಿಗಳ ಜತೆ ಹರಟೆ ಹೊಡೆಯುವುದನ್ನು ಕೇಳಿದ್ದಿರಾ. ಈಗ ಸ್ಟಾರ್ ನಟರು ತಮ್ಮ ಅಭಿಮಾನಿಗಳ ಜತೆ ನಿರಂತರ ಸಂಪರ್ಕ ಸಾಧಿಸಲು ಆಸಕ್ತಿ ತೋರಿದ್ದಾರೆ. ನಟ ಗಣೇಶ್ ಇದುವರೆಗೂ ಟ್ವಿಟ್ಟರ್‌ನಲ್ಲಿ ಹಾಗಾಗ ತಮ್ಮ ಸಿನಿಮಾ ಬಗ್ಗೆ ನ್ಯೂಸ್ ಪೋಸ್ಟ್ ಮಾಡುತ್ತಿದ್ದರು. ಈಗ ಅವರು ಫೇಸ್‌ಬುಕ್ ಪೇಜ್ ಮೂಲಕ ಅಭಿಮಾನಿಗಳ ಜತೆ ಸಂಪರ್ಕ ಸಾಧಿಸಲು ನಿರ್ಧರಿಸಿದ್ದಾರೆ.

ಸೋಮವಾರದಿಂದ ಇನ್ನು ಮುಂದೆ ಗಣೇಶ್ ಫೇಸ್‌ಬುಕ್ ಪೇಜ್‌ನಲ್ಲಿ ಅಭಿಮಾನಿಗಳ ಜತೆ ಸಂಪರ್ಕದಲ್ಲಿರುತ್ತಾರೆ. ಶ್ರೀ ಮುರಳಿಗೆ 7 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್‌ಗಳಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಫಾಲೋಯರ್ಸ್‌ಗಳನ್ನು ಹೊಂದಿರುವ ನಟ ಅವರು.ನಟ ಗಣೇಶ್ ಆ ದಾಖಲೆಯನ್ನು ಬ್ರೇಕ್ ಮಾಡಲು ಹೊರಟಿದ್ದಾರೆ.

ಗಣೇಶ್‌ಗೆ ಫ್ಯಾಮಿಲಿ ಆಡಿಯನ್ಸ್ ಜತೆಗೆ ಕಾಲೇಜು ಹುಡುಗ-ಹುಡುಗಿಯರು ಹೆಚ್ಚಿದ್ದಾರೆ. ಅವರು ತಮ್ಮ ಅನಿಸಿಕೆಗಳನ್ನು ಇನ್ನು ಮುಂದೆ ಗಣೇಶ್ ಅಫಿಶಿಯಲ್ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಳ್ಳಬಹುದು. ನಟಿಮಣೀಗಳು ಹೊಸ ಡ್ರೆಸ್ ತಗೊಂಡಿದ್ದನ್ನು , ಹೊಸ ಕಾರು ತಗೊಂಡಿದ್ದನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಗಣೇಶ್ ಯಾವ ರೀತಿಯ ಚಿತ್ರಗಳನ್ನು ಅಪ್‌ಲೋಡ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Write A Comment