ಮನೋರಂಜನೆ

ಬಾಹುಬಲಿಯನ್ನು ಕಟ್ಟಪ್ಪ ಕೊಂದದ್ದಕ್ಕೆ ಚಿತ್ರದ ನಿರ್ದೇಶಕ ರಾಜಮೌಳಿ ಹೇಳಿದ್ದೇನು…ಇಲ್ಲಿದೆ ನೋಡಿ…

Pinterest LinkedIn Tumblr

kattappa

ಹೈದರಾಬಾದ್: ‘ಕಟ್ಟಪ್ಪ ಬಾಹುಬಲಿಯನ್ನು ಕೊಂದದ್ದು ಯಾಕೆ?’ ಬಾಹುಬಲಿ ಸಿನಿಮಾ ನೋಡಿದ ಬಹುತೇಕ ಮಂದಿ ಈ ಪ್ರಶ್ನೆಯನ್ನು ಕೇಳುತ್ತಿರುತ್ತಾರೆ. ಆದರೆ ಈಗ ಚಿತ್ರದ ನಿರ್ದೇಶಕ ರಾಜಮೌಳಿ ಕಟ್ಟಪ್ಪ ಬಾಹುಬಲಿಯನ್ನು ಇರಿಯುವ ದೃಶ್ಯವನ್ನು ಯಾಕೆ ಕೊನೆಗೆ ಸೇರಿಸಿದ್ದು ಎನ್ನುವುದನ್ನು ಬಹಿರಂಗ ಮಾಡಿದ್ದಾರೆ.

ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ರಾಜಮೌಳಿ ತಮ್ಮ ಚಿತ್ರದ ಕ್ಲೈಮಾಕ್ಸ್ ಕಥೆಯನ್ನು ವಿವರಿಸಿದ್ದಾರೆ. ನಿಜವಾಗಿ ರಾಜಮೌಳಿ ಆರಂಭದಲ್ಲಿ ಬೇರೆ ರೀತಿ ಕ್ಲೈಮಾಕ್ಸ್ ತೋರಿಸಲು ಯೋಚನೆ ಮಾಡಿದ್ದರು. ಆದರೆ ಅಂತಿಮವಾಗಿ ಕಟ್ಟಪ್ಪ ಬಾಹುಬಲಿಗೆ ಇರಿಯುವ ದೃಶ್ಯವನ್ನು ತೋರಿಸಿ ಕ್ಲೈಮಾಕ್ಸ್ ಮಾಡಲು ಮುಂದಾದರು.

ರಾಜಮೌಳಿ ವಿವರಿಸಿದ್ದು ಹೀಗೆ: ಬಾಹುಬಲಿ ಭಾಗ ಎರಡು ನಿರ್ಮಾಣ ಮಾಡುವ ಸಂದರ್ಭದಲ್ಲಿ ಭಾಗ ಒಂದನ್ನು ಎಲ್ಲಿ ಕೊನೆ ಮಾಡಬೇಕು ಎನ್ನುವುದರ ಬಗ್ಗೆ ಚಿತ್ರ ತಂಡದಲ್ಲಿ ಚರ್ಚೆಯಾಯಿತು. ಈ ವೇಳೆ ನಾನು ಶಿವಗಾಮಿ (ರಮ್ಯಕೃಷ್ಣ) ಮಾಹಿಷ್ಮತಿ ರಾಜ್ಯದ ಉತ್ತರಾಧಿಕಾರಿಯಾಗಿ ಬಾಹುಬಲಿ ಹೆಸರನ್ನು ಘೋಷಣೆ ಮಾಡುವ ವೇಳೆ ಚಿತ್ರವನ್ನು ಕೊನೆ ಮಾಡುವುದಾಗಿ ನಿರ್ಧರಿಸಿದ್ದೆ. ನನ್ನ ಈ ನಿರ್ಧಾರಕ್ಕೆ ಚಿತ್ರ ತಂಡವು ಒಪ್ಪಿಕೊಂಡಿತು. ಆದರೆ ಈ ರೀತಿ ಅಂತ್ಯ ಮಾಡಿದರೆ ಚಿತ್ರ ಸಾಧಾರಣವಾಗಿ ಮುಗಿಯುತ್ತದೆ. ಅಷ್ಟೇ ಅಲ್ಲದೇ ಪ್ರೇಕ್ಷಕನಿಗೆ ಭಾಗ -2 ನೋಡುವಂತೆ ಯಾವುದೇ ಕುತೂಹಲ ಹುಟ್ಟು ಹಾಕುವುದಿಲ್ಲ ಎನ್ನುವುದು ನನಗೆ ಗೊತ್ತಾಯಿತು. ಹೀಗಾಗಿ ಕಟ್ಟಪ್ಪನೇ ತಾನು ಇರಿಯುವುದನ್ನು ಶಿವುಡು(ಪ್ರಭಾಸ್)ಗೆ ಹೇಳಿದರೆ ಚೆನ್ನಾಗಿ ಇರುತ್ತದೆ ಎಂದು ಭಾವಿಸಿ ಈ ದೃಶ್ಯವನ್ನು ಸೇರಿಸಿದೆ. ಆದರೆ ಈಗ ಕ್ಲೈಮಾಕ್ಸ್ ಸೂಪರ್ ಹಿಟ್ ಆಗಿದೆ. ಈ ಕ್ಲೈಮಾಕ್ಸ್ ನೋಡಿದ ಬಳಿಕ ವೀಕ್ಷಕರು ಕಟ್ಟಪ್ಪನ ಪಾತ್ರವನ್ನು ನೋಡಲೆಂದೇ ಮತ್ತೊಮ್ಮೆ ಬಾಹುಬಲಿಯನ್ನು ವೀಕ್ಷಿಸಲು ಥಿಯೇಟರ್‍ಗೆ ಆಗಮಿಸುತ್ತಿದ್ದಾರೆ ಎಂದು ರಾಜಮೌಳಿ ಹೇಳಿದ್ದಾರೆ.

Write A Comment