ಲಂಡನ್: ಇನ್ನಿಂಗ್ಸ್ ನ ಮೊದಲ ಓವರ್ ನಲ್ಲಿ ಬೌಲಿಂಗ್ ಮಾಡಿದ ಬೌಲರ್ ಒಬ್ಬರು ಪ್ರಥಮ ಮೂರು ಎಸೆತಗಳಲ್ಲೇ ಮೂರು ವಿಕೆಟ್ ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ವಾರ್ಸೆಸ್ಟರ್ ಶೈರ್ ತಂಡದ ಬೌಲರ್ 24 ವರ್ಷದ ಜೋ ಲೀಚ್ ಇಂಗ್ಲೀಷ್ ಕೌಂಟಿಯ ಏಕ ದಿನ ಟೂರ್ನಮೆಂಟ್ ನಲ್ಲಿ ಈ ಸಾಧನೆ ಮಾಡಿದವರಾಗಿದ್ದು, ಬೌಲಿಂಗ್ ಆರಂಭಿಸಿದ ಅವರು, ಪ್ರಥಮ ಮೂರು ಎಸೆತಗಳಲ್ಲಿ ನಾರ್ಥಂಪ್ಟನ್ ಶೈರ್ ನ ಬ್ಯಾಟ್ಸ್ ಮನ್ ಗಳಾದ ರಿಚರ್ಡ್ ಲೆವಿ, ರಾಬ್ ಕೀಫ್ ಹಾಗೂ ಬೆನ್ ಡಕೆಟ್ ರನ್ನು ಔಟ್ ಮಾಡಿ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2003 ರ ವಿಶ್ವ ಕಪ್ ವೇಳೆ ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳ ನಡುವಣದ ಪಂದ್ಯದಲ್ಲಿ ಶ್ರೀ