ಮನೋರಂಜನೆ

ಗೆಳೆಯನ ಮದುವೆಗೆ ’ದ್ವೀಪ’ವೇ ಗಿಫ್ಟ್: ದುಬಾರಿ ಉಡುಗೊರೆ ನೀಡಿದ ಕ್ರಿಸ್ಚಿಯಾನೊ ರೊನಾಲ್ಡೊ

Pinterest LinkedIn Tumblr

giftಪೋರ್ಟೊ (ಪೋರ್ಚುಗಲ್): ಪೋರ್ಚುಗಲ್ ಫುಟ್ಬಾಲ್ ತಂಡದ ನಾಯಕ ಮತ್ತು ರಿಯಲ್ ಮ್ಯಾಡ್ರಿಡ್‌ನ ಸೂಪರ್ ಸ್ಟಾರ್ ಕ್ರಿಸ್ಚಿಯಾನೊ ರೊನಾಲ್ಡೊ, ತಮ್ಮ ಗೆಳೆಯನ ಮದುವೆಗೆ ಗ್ರೀಕ್‌ನಲ್ಲಿ ಒಂದು ದ್ವೀಪವನ್ನೇ ಖರೀದಿಸಿ ಉಡುಗೊರೆಯನ್ನಾಗಿ ನೀಡಿದ್ದಾರೆ.

ರೊನಾಲ್ಡೊ ಅವರ ಗೆಳೆಯ ಮತ್ತು ದೀರ್ಘಕಾಲದ ಏಜೆಂಟ್ ಕೂಡ ಆಗಿರುವ ಜಾರ್ಜ್ ಮೆಂಡೆಸ್ ರೊನಾಲ್ಡೊ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ. ಪೋರ್ಚುಗೀಸ್ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ತೆರೆಮರೆಯಲ್ಲಿ ನಿಂತು ತಮ್ಮ ಯಶಸ್ಸಿಗೆ ಕಾರಣರಾದ ಜಾರ್ಜ್ ಮೆಂಡೆಸ್‌ಗಾಗಿ ರೊನಾಲ್ಡೊ ಗ್ರೀಕ್‌ನಲ್ಲಿ ದುಬಾರಿ ಬೆಲೆಯ ಸುಂದರ ದ್ವೀಪವೊಂದನ್ನು ಖರೀದಿಸಿದ್ದಾರೆ. ಕನಿಷ್ಠ 21 ಕೋಟಿ ರೂಪಾಯಿಯಂದ ಆರಂಭವಾಗುವ ಗ್ರೀಕ್ ದ್ವೀಪಗಳ ಬೆಲೆ, 350 ಕೋಟಿ ರೂ.ವರೆಗೂ ಇದೆ.

ರೊನಾಲ್ಡೊ ಜತೆ ಸ್ಟಾರ್ ಆಟಗಾರರಾದ ಜೇಮ್ಸ್ ರಾಡ್ರಿಗೆಸ್, ಜೋಸ್ ಮೌರಿನ್ಹೊ ಮತ್ತು ರಾಡಮೆಲ್ ಫಾಲ್ಕೊ ಅವರಿಗೂ ಜಾರ್ಜ್ ಮೆಂಡೆಸ್ ಏಜೆಂಟ್ ಆಗಿದ್ದಾರೆ. 2009ರಲ್ಲಿ ಕ್ರಿಸ್ಚಿಯಾನೊ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ತೊರೆದು 797 ಕೋಟಿ ರೂಪಾಯಿಗೆ ರಿಯಲ್ ಮ್ಯಾಡ್ರಿಡ್ ಕ್ಲಬ್ ಜತೆ ಒಪ್ಪಂದ ಮಾಡಿಕೊಳ್ಳುವಲ್ಲಿ ಮೆಂಡೆಸ್ ಪಾತ್ರ ಪ್ರಮುಖವಾಗಿತ್ತು. ಫುಟ್ಬಾಲ್ ಜಗತ್ತಿನಲ್ಲಿ 49ರ ಹರೆಯದ ಜಾರ್ಜ್ ಮೆಂಡೆಸ್ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದಾರೆ.

Write A Comment