ಮುಂಬಯಿ: ಪ್ರಭಾಸ್ ಫ್ಯಾನ್ ಗಳಿಗೆ ಇಲ್ಲೊಂದು ಸಿಹಿಸುದ್ದಿ. ಬಾಹುಬಲಿ ಹೀರೋ ಪ್ರಭಾಸ್ ಬರುವ ಡಿಸೆಂಬರ್ ನಲ್ಲಿ ಸಪ್ತಪದಿ ತುಳಿಯಲಿದ್ದಾರಂತೆ.
ಬಾಹುಬಲಿ ಚಿತ್ರದ ನಂತರ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿರುವ ಪ್ರಭಾಸ್ ಮದುವೆ ವಿಷಯ ಕೇಳಿ ಅನೇಕ ಹುಡುಗಿಯರಿಗೆ ಬೇಸರವಾಗಿದೆಯಂತೆ.
ಬಾಲಿವುಡ್ ನಟ ಶಾಹೀದ್ ಕಪೂರ್ ರೀತಿಯೇ ಪ್ರಬಾಸ್ ತನ್ನ ಪೋಷಕರು ನೋಡಿ ಒಪ್ಪಿಕೊಂಡಿರುವ ಹುಡುಗಿಯ ಕೈ ಹಿಡಿಯಲು ನಿರ್ಧರಿಸಿದ್ದಾರಂತೆ. 35 ವರ್ಷದ ಪ್ರಭಾಸ್ 22 ವರುಷದ ಯುವತಿಯ ಜೊತೆ ಹಸೆಮಣೆ ಏರಲಿದ್ದಾರೆ.
ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಭಾಗ 2 ಸೆಪ್ಟಂಬರ್ ನಿಂದ ಆರಂಭವಾಗಲಿದ್ದು. ಡಿಸೆಂಬರ್ ನಲ್ಲಿ ವಿವಾಹ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.
ಪ್ರಭುದೇವ್ ಮತ್ತು ಅಜಯ್ ದೇವಗನ್ ಪ್ರಧಾನ ಭೂಮಿಕೆಯಲ್ಲಿ ಅಭಿನಯಿಸಿರುವ ಆಕ್ಷನ್ ಜಾಕ್ಷನ್ ಎಂಬ ಬಾಲಿವುಡ್ ಚಿತ್ರದಲ್ಲಿ ಪ್ರಭಾಸ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ,