ಬೆಂಗಳೂರು, ಆ.6- ತೆಲುಗಿನ ಅದ್ಧೂರಿ ಚಿತ್ರ ರಾಣಿ ರುದ್ರಮದೇವಿ ಕನ್ನಡಕ್ಕೆ ಡಬ್ ಆಗುತ್ತಿದ್ದು, ಇದನ್ನು ಕನಕಪುರ ಶ್ರೀನಿವಾಸ್ ಅವರು ಹಕ್ಕು ಪಡೆದಿದ್ದಾರೆ. ಆರ್.ಎಸ್.ಪ್ರೊಡಕ್ಷನ್ಸ್‌ನಲ್ಲಿ ತಯಾರಾಗುತ್ತಿದೆ ಎಂದು ಡಬ್ಬಿಂಗ್ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ತಿಳಿಸಿದ್ದಾರೆ.
ಈ ಸಂಜೆ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಹುಲಿ ಚಿತ್ರದ ವಿಶೇಷವೆಂದರೆ, ಬಾಲಿವುಡ್‌ನ ನಂ.1 ನಟಿ ಶ್ರೀದೇವಿಯವರು 20 ವರ್ಷಗಳ ನಂತರ ಮತ್ತೆ ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದ್ದಾರೆ.
ಈ ಚಿತ್ರ ಈಗಾಗಲೇ ಕನ್ನಡಕ್ಕೆ ಡಬ್ ಆಗುತ್ತಿದ್ದು, ತೆಲುಗು ಮತ್ತು ತಮಿಳು ಚಿತ್ರಗಳ ಜತೆಯಲ್ಲೇ ಕನ್ನಡದಲ್ಲೂ ಬಿಡುಗಡೆಯಾಗಲಿದೆ. ಇದರಿಂದ ಕನ್ನಡಿಗರು ಕೂಡ ಈ ಚಿತ್ರವನ್ನು ಕನ್ನಡದಲ್ಲೇ ನೋಡಬಹುದಾಗಿದೆ ಎಂದು ಹೇಳಿದರು.ಎಸ್.ನಾರಾಯಣ್ ಅವರು ತೆಲುಗು ಚಿತ್ರದ ಕನ್ನಡ ಡಬ್ಬಿಂಗ್ ಅನುಮತಿ ಪಡೆದಿರುವ ಬಗ್ಗೆ ಕೇಳಿದಾಗ ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.