ಫೇಮಸ್ ಆಗುವ ಖಯಾಲಿಗೆ ಕೆಲವರು ಯಾವ ಮಟ್ಟಕ್ಕಿಳಿಯಲು ಬೇಕಾದರೂ ಮುಂದಾಗುತ್ತಾರೆ. ಸಾಮಾಜಿಕ ಜಾಲ ತಾಣದಲ್ಲಿ ತನ್ನನ್ನು ಫಾಲೋ ಮಾಡುತ್ತಿರುವ ಅಭಿಮಾನಿಗಳಿಗೆ ಈ ನಟಿ ಟಾಪ್ ಲೆಸ್ ಫೋಟೋ ಪೋಸ್ಟ್ ಮಾಡಿದ್ದಾಳೆ.
ಹಾಲಿವುಡ್ ನಟಿ ಲಿಂಡ್ಸೆ ಲೋಹಾನ್ ಹಾಲಿಡೇ ಕಳೆಯಲು ಗ್ರೀಸ್ ಗೆ ತೆರಳಿದ್ದು, ಕನ್ನಡಿ ಮುಂದೆ ನಿಂತು ತಮ್ಮ ಸೆಲ್ಫಿ ತೆಗೆದುಕೊಂಡಿರುವ ಅವರು ಈ ಚಿತ್ರವನ್ನು ಫೋಟೋ ಅಪ್ ಲೋಡ್ ಮಾಡುವ ಸಾಮಾಜಿಕ ಜಾಲ ತಾಣ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ ಸ್ಟಾಗ್ರಾಂ ನಲ್ಲಿ ನಟಿ ಲಿಂಡ್ಸೆ ಲೋಹಾನ್ ಗೆ ಸುಮಾರು 3.8 ಮಿಲಿಯನ್ ಮಂದಿ ಫಾಲೋವರ್ಸ್ ಇದ್ದು, ಈ ಸೆಲ್ಫಿ ಹಾಕಿದ ಬಳಿಕ ಈಕೆಯ ಅಭಿಮಾನಿ ಬಳಗ ಮತ್ತಷ್ಟು ಹೆಚ್ಚಾಗಿದೆಯಂತೆ. ಹಾಲಿವುಡ್ ನಟಿಯರನ್ನು ಈ ವಿಷಯದಲ್ಲಿ ಈಗ ಕೆಲ ಬಾಲಿವುಡ್ ನಟಿಯರೂ ಫಾಲೋ ಮಾಡುತ್ತಿದ್ದು, ಈ ವಿಚಾರದಲ್ಲಿ ಪೂನಂ ಪಾಂಡೆ ಮುಂದಿದ್ದಾರೆ.