ಮನೋರಂಜನೆ

ಗದ್ಗದಿತರಾಗಿಯೇ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ ಕ್ಲಾರ್ಕ್

Pinterest LinkedIn Tumblr

stuನಾಟಿಂಗ್‌ಹಾಮ್‌, ಆಗಸ್ಟ್ .08: ಆಶಸ್ ಸರಣಿ ಸೋಲಿನ ನಂತರ ಆಸ್ಟ್ರೇಲಿಯಾ ತಂಡದ ಟೆಸ್ಟ್ ನಾಯಕ ಮೈಕಲ್ ಕ್ಲಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.

ಸ್ಟುವರ್ಟ್ ಬ್ರಾಡ್ ಮತ್ತು ಸ್ಟಾಕ್ ಮಾರಕ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಆಶಸ್ ಸರಣಿಯ ನಾಲ್ಕನೇ ಟೆಸ್ಟ್ ನಲ್ಲಿ ಇನಿಂಗ್ಸ್ ಮತ್ತು 78 ರನ್ ಗಳ ಸೋಲು ಕಂಡ ನಂತರ ಕ್ಲಾರ್ಕ್ ನೋವಿನಿಂದಲೇ ವಿದಾಯ ಹೇಳಿದ್ದಾರೆ. ಆಗಸ್ಟ್ 20 ರಿಂದ ಆರಂಭವಾಗಲಿರುವ ಆಶಸ್ ಸರಣಿಯ ಕೊನೆಯ ಟೆಸ್ಟ್ ಪಂದ್ಯ ಆಡಿ ಆಸ್ಟ್ರೇಲಿಯಾದ ಬ್ಯಾಟ್ಸಮನ್ ನಿರ್ಗಮಿಸಲಿದ್ದಾರೆ.

ಓವೆಲ್ ಮೈದಾನದಲ್ಲಿ ಕೊನೆಯ ಪಂದ್ಯ ಆಡುತ್ತೇನೆ. ನಿವೃತ್ತಿಗೆ ಇದು ಸಕಾಲ ಎಂದು ಅನಿಸುತ್ತಿದೆ. ಕಳೆದ ಒಂದು ವರ್ಷದಿಂದ ನನ್ನ ಪ್ರದರ್ಶನ ಅಷ್ಟೇನೂ ಉತ್ತಮವಾಗಿಲ್ಲ. ನಾವು ಎಲ್ಲ ಬಗೆಯಲ್ಲಿ ಶ್ರಮಿಸಿದರೂ ಸೋಲು ಕಾಣಬೇಕಾಯಿತು ಎಂದು ಕ್ಲಾರ್ಕ್ ಮಾಧ್ಯಮಗಳಿಗೆ ವಿದಾಯದ ಸಂಗತಿ ತಿಳಿಸಿದರು.

ಮಾತನಾಡುತ್ತದ ಗದ್ಗದಿತರಾದ ಕ್ಲಾರ್ಕ್ ತಮ್ಮ ಟೆಸ್ಟ್ ಕ್ರಿಕೆಟ್ ಜೀವನವನ್ನು ಮೆಲುಕು ಹಾಕಿದರು. 11 ವರ್ಷದ ಹಿಂದೆ ಅಂತಾರಾಷ್ಟ್ರೀಯ ಟೆಸ್ಟ್ ಆಡಿದ ಕ್ಲಾರ್ಕ್ 8000 ರನ್ ಗಳಿಕೆ ಮಾಡಿದ್ದಾರೆ.28 ಟೆಸ್ಟ್ ಶತಕಗಳ ಸಾಧನೆ ಮಾಡಿರುವ ಮೈಕಲ್ ಪ್ರದರ್ಶನ ಇತ್ತಿಚೆಗೆ ಕುಂಠಿತವಾಗಿತ್ತು. 34 ವರ್ಷದ ಕ್ಲಾರ್ಕ್ 2004 ರಲ್ಲಿ ಭಾರತದ ವಿರುದ್ಧ ಬೆಂಗಳೂರಿನಲ್ಲಿ ತಮ್ಮ ಮೊದಲ ಟೆಸ್ಟ್ ಆಡಿದ್ದರು.

ಮುಂದಿನ ಪೀಳೆಗೆಗೆ ಕ್ರಿಕೆಟ್ ವೇದಿಕೆಯನ್ನು ಬಿಟ್ಟುಕೊಡಲು ಇದು ಸಕಾಲ. ನನ್ನ ದಿಢೀರ್ ನಿರ್ಧಾರ ಆಸ್ಟ್ರೇಲಿಯಾ ತಂಡದ ಆಟಗಾರರಲ್ಲಿ ಆಶ್ಚರ್ಯ ಉಂಟುಮಾಡಿರಬಹುದು. ಆದರೆ ನನಗೆ ಹೊರಗೆ ಕುಳಿತು ಪ್ರೋತ್ಸಾಹ ನೀಡುವುದರಲ್ಲೇ ಸಂತಸವಿದೆ ಎಂದರು.

Write A Comment