ಮನೋರಂಜನೆ

ಸ್ಯಾಂಡಲ್ ವುಡ್ ನಟರಿಬ್ಬರ ಪೈಪೋಟಿಗೆ ಸಾಕ್ಷಿಯಾಗಲಿದೆ ಆ.14 !

Pinterest LinkedIn Tumblr

ganeshಸ್ಯಾಂಡಲ್ ವುಡ್ ನಟರಿಬ್ಬರ ನಡುವಿನ ಪೈಪೋಟಿಗೆ ಆಗಸ್ಟ್ 14 ಸಾಕ್ಷಿಯಾಗಲಿದೆ. ಇಬ್ಬರೂ ಜನಪ್ರಿಯ ನಟರಾಗಿರುವ ಕಾರಣ ಯಾರು ಗೆಲ್ಲುತ್ತಾರೆಂಬ ಕುತೂಹಲ ಕನ್ನಡ ಸಿನಿ ಪ್ರೇಕ್ಷಕರಲ್ಲಿ ಮನೆ ಮಾಡಿದೆ.

ಹಾಗೆಂದು ಇವರೇನೂ ಎದುರಾಬದುರಾ ನಿಲ್ಲುತ್ತಿಲ್ಲ. ಬದಲಾಗಿ ಆಗಸ್ಟ್ 14 ರಂದು ತಮ್ಮ ಚಿತ್ರಗಳ ಮೂಲಕ ಮುಖಾಮುಖಿಯಾಗುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಉಪ್ಪಿ 2’ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಬುಗುರಿ’ ಚಿತ್ರಗಳು ಅಂದು ಬಿಡುಗಡೆಯಾಗುತ್ತಿರುವುದೇ ಇದಕ್ಕೆ ಕಾರಣ.

ಈ ಎರಡೂ ಚಿತ್ರಗಳ ಕುರಿತು ಗಾಂಧಿ ನಗರದಲ್ಲಿ ಆಪಾರ ನಿರೀಕ್ಷೆಗಳಿವೆ. ಬಹು ದಿನಗಳ ಬಳಿಕ ಉಪೇಂದ್ರ ‘ಉಪ್ಪಿ 2’ ಮೂಲಕ ವಿಜೃಂಭಿಸಲಿದ್ದಾರೆಂದು ಹೇಳಲಾಗುತ್ತಿದ್ದರೆ, ಗೋಲ್ಡನ್ ಸ್ಟಾರ್ ಗಣೇಶ್ ಗೆ ‘ಬುಗುರಿ’ 25 ನೇ ಚಿತ್ರವಾಗಿದ್ದು, ಎಂ.ಡಿ. ಶ್ರೀಧರ್ ನಿರ್ದೇಶನದ ಈ ಚಿತ್ರದ ಕುರಿತು ಆಪಾರ ನಿರೀಕ್ಷೆಗಳಿವೆ. ಎರಡು ಬಿಗ್ ಸ್ಟಾರ್ ಗಳ ಚಿತ್ರಗಳು ಏಕ ಕಾಲದಲ್ಲಿ ಬಿಡುಗಡೆಯಾಗುತ್ತಿದ್ದು, ಕನ್ನಡ ಚಿತ್ರ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆಂಬುದನ್ನು ಕಾದು ನೋಡಬೇಕಿದೆ.

Write A Comment