ಲಿಖಿಲ್ ಅಡ್ವಾಣಿ ನಿರ್ದೇಶನದ ಕಟ್ಟಿ ಬಟ್ಟಿ ಸಿನಿಮಾದಲ್ಲಿ ಕಂಗನಾ ಅಭಿನಯಿಸುತ್ತಿರುವ ವಿಚಾರ ನಿಮಗೆಲ್ಲಾ ಗೊತ್ತೇ ಇದೆ. ಆದ್ರೆ ಕಂಗನಾ ಆ ಪಾತ್ರ ನಿರ್ವಹಿಸೋಕೆ ಕಾರಣ ಸಲ್ಮಾನ್ ಖಾನ್ ಅಂತೆ. ಸ್ವತಃ ಸಲ್ಮಾನ್ ಖಾನ್ ಅವರೇ ನಿಖಿಲ್ ಅಡ್ವಾಣಿ ಕಂಗನಾಳನ್ನು ಸಿನಿಮಾಗೆ ನಾಯಕಿ ಆಯ್ಕೆ ಮಾಡಿಕೊಳ್ಳುವಂತೆ ಹೇಳಿದ್ದರಂತೆ.
ಸಿನಿಮಾ ಸ್ಕ್ರಿಫ್ಟ್ ನ್ನು ನಿಖಿಲ್ ಸಲ್ಲು ಭಾಯಿಗೆ ತೋರಿಸಲಿದ್ರಂತೆ. ತೋರಿಸಿ ಸಿನಿಮಾಗೆ ನಾಯಕಿಯನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಚರ್ಚಿಸಿದ್ರಂತೆ. ಈ ವೇಳೆ ಸಲ್ಲು ಈ ಪಾತ್ರಕ್ಕೆ ಕಂಗನಾಳೇ ಸೂಕ್ತ ವ್ಯಕ್ತಿ ಅಂತಾ ಸಲಹೆ ನೀಡಿದ್ರಂತೆ. ನಿಖಿಲ್ ಅಡ್ವಾಣಿ ಕೂಡ ಸಲ್ಲು ಮಾತಿಗೆ ಓಕೆ ಅಂದ್ರಂತೆ. ಅದೇ ದಿನ ರಾತ್ರಿ ಸಲ್ಲು ಕಂಗನಾಗೆ ಕಾಲ್ ಮಾಡಿ ಪಾತ್ರಕ್ಕೆ ಸೆಲೆಕ್ಟ್ ಆಗಿರುವ ಬಗ್ಗೆ ಹೇಳಿದ್ರಂತೆ. ಅದರಂತೆ ನಿಖಿಲ್ ಅಡ್ವಾಣಿ ಅವರನ್ನು ಕಂಗನಾ ಭೇಟಿ ಮಾಡಿದ್ರಂತೆ.
ಇನ್ನು ಸಿನಿಮಾದಲ್ಲಿ ಕಂಗನಾಗೆ ಜೋಡಿಯಾಗಿ ಇಮ್ರಾಮ್ ಖಾನ್ ಕಾಣಿಸಿಕೊಂಡಿದ್ದು. ಈ ಸಿನಿಮಾ ಈಗಾಗಲೇ ಬಾಲಿವುಡ್ ಅಂಗಳದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಮುಂದಿನ ತಿಂಗಳು 18 ರಂದು ಈ ಸಿನಿಮಾ ಪ್ರೇಕ್ಷಕರ ಎದುರಿಗೆ ಬರಲಿದೆ.