ಚಂದನವನದಲ್ಲಿ ಹೊಸಬರೇ ಕೂಡಿ ಮಾಡಿರುವ ಅದೆಷ್ಟೋ ಸಿನಿಮಾಗಳು ಈಗಗಾಲೇ ರಿಲೀಸ್ ಆಗಿವೆ. ಇದೇ ಸಾಲಿಗೆ ಸೇರುವ ಸಿನಿಮಾವೊಂದು ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾಗುವುದಕ್ಕೆ ರೆಡಿಯಾಗಿ ನಿಂತಿದೆ. ಅದೇ ಮುದ್ದು ಮನಸೇ.
ಮುದ್ದು ಮನಸೇ ಹೊಸ ಪ್ರತಿಭೆಗಳೇ ಸೇರಿ ಮಾಡಿರುವ ರೋಮ್ಯಾಂಟಿಕ್ ಸಿನಿಮಾ. ಸಿನಿಮಾದಲ್ಲಿ ಅರು ಗೌಡ ನಾಯಕನಾಗಿ ಕಾಣಿಸಿಕೊಂಡ್ರೆ, ನಿತ್ಯಾರಾಮ್ ಹಾಗೂ ಐಶ್ವರ್ಯಾ ನಾಗ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಅನಂತ್ ಶೈನ್ ಅನ್ನೋ ನವ ನಿರ್ದೇಶಕ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
ಈಗಾಗಲೇ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಅತ್ಯಂತ ರಿಚ್ ಆಗಿ ಮೂಡಿ ಬಂದಿದೆ. ಇನ್ನು ಹಾಡುಗಳಂತೂ ಈಗಾಗಲೇ ಸಿನಿಪ್ರಿಯರಿಗೆ ಸಖತ್ ಇಷ್ಟವಾಗಿದೆ. ಸಿನಿಮಾದಲ್ಲಿರುವ ಆರು ಹಾಡುಗಳಿಗೆ ಆರು ಜನ ಸಾಹಿತ್ಯ ಬರೆದಿದ್ದಾರೆ. ಸಿನಿಮಾದಲ್ಲಿ ತಾಯಿ ಸೆಂಟಿಮೆಂಟಲ್ ಇರುವ ಹಾಡೊಂದಿದ್ದು, ಹಾಡನ್ನು ಜೋಗಿ ಪ್ರೇಮ್ ಹಾಡಿದ್ದಾರೆ. ಕೊನೆಯ ಹಂತದ ಶೂಟಿಂಗ್ ನಲ್ಲಿರುವ ಈ ಸಿನಿಮಾ ಇದೇ ತಿಂಗಳ 28 ಅಂದ್ರೆ ವರಮಹಾಲಕ್ಷ್ಮಿ ಹಬ್ಬಕ್ಕೆ ಪ್ರೇಕ್ಷಕರೆದುರಿಗೆ ಬರಲಿದೆ.