ಪಡ್ಡೆ ಹುಡುಗರ ನಿದ್ದೆಗೆಡಿಸುವಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅಲಿಯಾ ಭಟ್ ಇದೀಗ ಮತ್ತೊಮ್ಮೆ ಬಿಕನಿಯಲ್ಲಿ ಕಾಣಿಸಿಕೊಂಡು ತನ್ನ ಪ್ರತಿಭೆ ಪ್ರದರ್ಶಿಸಲು ಮುಂದಾಗಿದ್ದಾಳೆ.
ಹೌದು. ತನ್ನ ಮೊದಲ ಚಿತ್ರ ‘ಸ್ಟೂಡೆಂಟ್ ಆಫ್ ದಿ ಇಯರ್’ನಲ್ಲೇ ಟೂ ಪೀಸ್ ಹಾಕಿಕೊಂಡು ಸುದ್ದಿಯಾಗಿದ್ದ ಅಲಿಯಾ ಭಟ್ ಇದೀಗ ಶಾಹೀದ್ ಕಪೂರ್ ಜೊತೆ ನಟಿಸಿರುವ ‘ಶಾಂದಾರ್’ ಚಿತ್ರದಲ್ಲಿ ಹಾಟ್ ಪಿಂಕ್ ಬಿಕಿನಿ ತೊಟ್ಟು ಮಿಂಚಿದ್ದು ಈ ಬಟ್ಟೆಗೆ ಸರಿಯಾಗುವಂತೆ ತನ್ನ ದೇಹವನ್ನೂ ಸಹ ಇದಕ್ಕಾಗಿಯೇ ಹುರಿಗೊಳಿಸಿದ್ದಾಳಂತೆ.
ಈ ಚಿತ್ರದಲ್ಲಿ ಚಳಿ ಬಿಡಿಸುವಂತಹ ಪಾತ್ರದಲ್ಲಿ ಅಲಿಯಾ ಕಾಣಿಸಿಕೊಂಡಿದ್ದು ಮತ್ತೊಮ್ಮೆ ಈ ಚಿತ್ರದ ಮೂಲಕ ಗೆಲುವಿನ ನಗೆ ಬೀರಲಿದ್ದಾಳೆ ಎಂಬ ಮಾತು ಕೇಳಿ ಬರುತ್ತಿದೆ.