ಮನೋರಂಜನೆ

ಮಹೇಶ್ ಬಾಬು ಸಕತ್ ಹ್ಯಾಂಡ್ಸಮ್ ಅಂತಾರೇ ಶೃತಿ ಹಾಸನ್

Pinterest LinkedIn Tumblr

shrutiಪ್ರಿನ್ಸ್ ಮಹೇಶ್ ಬಾಬು ಜೊತೆಗಿನ ತಮ್ಮ ಅಭಿನಯದ ‘ಶ್ರೀಮಂತುಡು’ ಚಿತ್ರ ಬಿಡುಗಡೆಗೊಂಡ ಒಂದೇ ವಾರದಲ್ಲಿ 50 ಕೋಟಿ ರೂ. ಗಳಿಕೆ ಮಾಡಿರುವುದಕ್ಕೆ ನಟಿ ಶೃತಿ ಹಾಸನ್ ಥ್ರಿಲ್ ಆಗಿದ್ದಾರೆ.

ಈ ಕುರಿತು ಮಾತನಾಡಿರುವ ಶೃತಿ ಹಾಸನ್, ಮಹೇಶ್ ಬಾಬು ಒಬ್ಬ ಅದ್ಬುತ ನಟ. ಅವರೊಂದಿಗೆ ತಾವು ಅಭಿನಯಿಸಿರುವುದು ಮರೆಯಲಾಗದ ಅನುಭವ ಎಂದು ಹೇಳಿದ್ದಾರಲ್ಲದೇ ಮಹೇಶ್ ಬಾಬು ಹ್ಯಾಂಡ್ಸಮ್ ನಟರ ಪೈಕಿ ಒಬ್ಬರು ಎಂದು ಹಾಡಿ ಹೊಗಳಿದ್ದಾರೆ.

ದುಬೈನಲ್ಲಿ ನಡೆದ  ‘ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಆವಾರ್ಡ್ಸ್’ ನಲ್ಲಿ ಪಾಲ್ಗೊಂಡು ಮರಳಿ ಬಂದ ಬಳಿಕ ಶೃತಿ ಹಾಸನ್ ತಮ್ಮ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರಲ್ಲದೇ ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಜೊತೆಗಿನ ‘ಪುಲಿ’ ಚಿತ್ರದ ಬಿಡುಗಡೆಯನ್ನು ಕುತೂಹಲದಿಂದ ಕಾಯುತ್ತಿದ್ದಾರೆ. ಅಕ್ಷಯ್ ಕುಮಾರ್ ಜೊತೆಗಿನ ಬಾಲಿವುಡ್ ಚಿತ್ರ ‘ಗಬ್ಬರ್ ಈಸ್ ಬ್ಯಾಕ್’ ಕೂಡಾ ಯಶಸ್ವಿಯಾಗಿರುವುದು ಶೃತಿ ಹಾಸನ್ ರ ಖುಷಿಯನ್ನು ಇಮ್ಮಡಿಗೊಳಿಸಿದೆ.

Write A Comment