ಸಿನಿಮಾ ನಟಿಯರು ಯಾವಾಗ ಮದುವೆಯಾಗುತ್ತಾರೆ ಯಾರನ್ನು ಮದುವೆಯಾಗುತ್ತಾರೆ ಎಂಬುದೇ ಕಷ್ಟ . ಇದಕ್ಕೆ ಸಾಕ್ಷಿ ಎಂಬಂತೆ ಹಾಲಿವುಡ್ ನಟಿಯೊಬ್ಬಳು ತನ್ನ ಮದುವೆಗೆ ಹೆತ್ತ ತಾಯಿಯನ್ನೂ ಕರೆಯದೇ ಸುದ್ದಿಯಾಗಿದ್ದಾಳೆ.
ಹೌದು. ಹಾಲಿವುಡ್ ತಾರೆ ಜೆನಿಫರ್ ಅನಿಸ್ಟನ್ ಇತ್ತೀಚೆಗಷ್ಟೇ ರಹಸ್ಯವಾಗಿ ಜಸ್ಟೀನ್ ನನ್ನು ಮದುವೆಯಾಗಿದ್ದು ಮದುವೆಯ ಕರೆಯೋಲೆಯನ್ನು ತನ್ನ ತಾಯಿಗೆ ಕಳುಹಿಸಿಯೇ ಇರಲಿಲ್ಲವಂತೆ. ಇದರಿಂದನೊಂದ ಜೆನಿಫರ್ ಅಮ್ಮ ನ್ಯಾನ್ಸಿ ಡೋ ನನ್ನ ಮಗಳು ತನ್ನ ಮದುವೆಗೆ ನನಗೇ ತಿಳಿಸಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ತಾವು ಮಗಳ ಮದುವೆಗೆ ಕರೆಯೋಲೆ ಬರಬಹುದೆಂದು ನಿರೀಕ್ಷಿಸಿದ್ದೆ. ಆದರೆ ನನ್ನ ಮಗಳು ನನಗೆ ಆಹ್ವಾನ ಪ್ರತಿಕೆಯನ್ನು ನೀಡಲೇ ಇಲ್ಲ. ಹಾಗಾಗಿ ನಾನು ಮದುವೆಯನ್ನು ಅಟೆಂಡ್ ಮಾಡಲಾಗಲಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದು 46 ರ ಪ್ರಾಯದ ಜೆನಿಫರ್ ಅನಿಸ್ಟರ್ ಮದುವೆಗೆ ಕರೆಯದಿದ್ದರೂ ಜೀವನದಲ್ಲಿ ಸೆಟೆಲ್ ಆಗಿರುವುದು ನನಗೆ ಸಂತೋಷವೇ ನನ್ನ ಶುಭಾಶಯ ಸದಾ ಆಕೆಯ ಮೇಲೆ ಇರುತ್ತದೆ ಎಂದು ತಾಯಿ ತಿಳಿಸಿದ್ದಾರೆ.