ಶಾಹೀದ್ ಕಪೂರ್ ಹಾಗೂ ಆಲಿಯಾ ಭಟ್ ಜೊತೆಯಾಗಿ ನಿಸಿರುವ ಶಾಂದಾರ್ ಸಿನಿಮಾದ ಕುರಿತಾಗಿ ನಿನ್ನೆ ಸುದ್ದಿಗೋಷ್ ನಡೆಯಿತು. ಆದರ್ ಸುದ್ದಿಗೋಷ್ಟಿಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುವಷ್ಟರಲ್ಲಿ ಶಾಹೀದ್ ಕಪೂರ್ ಅವರಿಗೆ ಸುಸ್ತಾಗಿ ಹೋಗಿತ್ತಂತೆ.
ಅಷ್ಟಕ್ಕೂ ಇದಕ್ಕೆಲ್ಲಾ ಕಾರಣ ಇಷ್ಟೇ. ಮದುವೆಯಾದ ಬಳಿಕ ಶಾಹೀದ್ ಇದೇ ಮೊದಲ ಬಾರಿಗೆ ಮಾಧ್ಯಮದವರನ್ನು ಭೇಟಿಯಾಗಿದ್ದರು. ಹೀಗಾಗಿ ಸಿನಿಮಾದ ಕುರಿತಾಗಿ ಮಾತನಾಡಲು ಕರೆದ ಸುದ್ದಿಗೋಷ್ಟಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಬರೀ ಶಾಹೀದ್ ವೈವಾಹಿಕ ಜೀವನದ ಬಗ್ಗೆಯೇ ಪ್ರಶ್ನೆ ಕೇಳಿದ್ರಂತೆ. ನಿರ್ಮಾಪಕ ಕರಣ್ ಜೋಹರ್ ಅದೆಷ್ಟೋ ಬಾರಿ ಸಿನಿಮಾದ ಬಗ್ಗೆ ಮಾತನಾಡಿ ಅಂದ್ರೂ ಮತ್ತೆ ಅದೇ ವಿಷಯಕ್ಕೆ ಬರುತ್ತಿದ್ದರಂತೆ. ಇದು ಶಾಹೀದ್ ಗೂ ತೀವ್ರ ಇರಿಸು ಮುರಿಸು ಉಂಟು ಮಾಡಿತ್ತಂತೆ.
ಇನ್ನು ಎಷ್ಟು ಹೇಳಿದ್ರೂ ಮಾಧ್ಯಮದವರು ಕೇಳದೇ ಇದ್ದಾಗ ಸ್ವತಃ ಶಾಹೀದ್ ಅವರೇ ದಯವು ನನ್ನ ಮದುವೆಯ ಬಗ್ಗೆ ಪ್ರಶ್ನೆ ಕೇಳಬೇಡಿ, ಸಿನಿಮಾದಲ್ಲಿ ನಡೆದ ನನ್ನ ಹಾಗೂ ಆಲಿಯಾ ಮದುವೆಯ ಬಗ್ಗೆ ಮಾತನಾಡಿ ಅಂತಾ ಹೇಳಿದ್ರಂತೆ.