ಮನೋರಂಜನೆ

ಭಾರೀ ಮಳೆಗೆ ಮುಂಗಾರು ಮಳೆ-2 ಚಿತ್ರತಂಡ ತತ್ತರ

Pinterest LinkedIn Tumblr

mungaruಸಕಲೇಶಪುರ, ಆ.12-ಇಲ್ಲಿನ ಅರಣ್ಯ ಪ್ರದೇಶದಲ್ಲಿ ಮುಂಗಾರು ಮಳೆ-2 ಚಿತ್ರದ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಭಾರೀ ಮಳೆಗೆ ಚಿತ್ರತಂಡ ಸಿಲುಕಿ ತತ್ತರಿಸಿದೆ.ನಟ ಗಣೇಶ್ ಹಾಗೂ ರವಿಶಂಕರ್ ಅರಣ್ಯದಲ್ಲಿ ಸಂಪರ್ಕ ಸಿಗದೆ ಪರದಾಡುವಂತಾಯಿತು. ಚಿತ್ರತಂಡ ಸಕಲೇಶಪುರದಿಂದ 20 ಕಿ.ಮೀ.ದೂರದ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಭಾರೀ

ಮಳೆ ಸುರಿದ ಪರಿಣಾಮ ಚಿತ್ರತಂಡ ತೊಂದರೆಗೆ ಸಿಲುಕಿತು.ಈ ವೇಳೆ ಮೊಬೈಲ್ ನೆಟ್‌ವರ್ಕ್‌ಗಳು ಜಾಮಾಗಿದ್ದರಿಂದ ನಟ ಗಣೇಶ್ ಹಾಗೂ ರವಿಶಂಕರ್ ಸಂಪರ್ಕಕ್ಕೆ ಸಿಗದೆ ಶೂಟಿಂಗ್ ನಿಲ್ಲಿಸಿ ಕಾಡಿನಲ್ಲೇ ಸುಮ್ಮನೆ ಕಾಲ ಕಳೆಯುವಂತಾಯಿತು.

Write A Comment