ಮನೋರಂಜನೆ

ರೆನೋ ರಾಯಭಾರಿಯಾಗಿ ರಣಬೀರ್‌ ಕಪೂರ್

Pinterest LinkedIn Tumblr

ranbeerಇತ್ತ ಸಾಲು ಸಾಲು ಚಿತ್ರಗಳು, ಅತ್ತ ಅವುಗಳ ಜೊತೆ ಜೊತೆಗೇ ಬೆಂಬತ್ತುವ ಗಾಸಿಪ್‌ಗಳ ನಡುವೆ ಬ್ಯುಸಿ ಆಗಿದ್ದ ನಟ ರಣಬೀರ್‌ ಕಪೂರ್, ಇದೀಗ ರೆನೋ ಇಂಡಿಯಾ ಆಟೊಮೊಬೈಲ್ ರಾಯಭಾರಿಯಾಗಿ ಹೊಸ ಜವಾಬ್ದಾರಿಗೆ ಒಪ್ಪಿಕೊಂಡಿದ್ದಾರೆ.

‘ಸಾವರಿಯಾ’ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿದ ರಣಬೀರ್ ಕಪೂರ್‌ ಅವರನ್ನು ನಂತರ ಸಾಲು ಸಾಲು ಅವಕಾಶಗಳು ಹುಡುಕಿ ಬಂದವು. ‘ಲಕ್ ಬೈ ಚಾನ್ಸ್’, ‘ರಾಜ್‌ನೀತಿ’, ‘ಅಂಜಾನಾ ಅಂಜಾನಿ’, ‘ಬರ್ಫಿ’, ‘ಯೇ ಜವಾನಿ ಹೈ ದಿವಾನಿ’, ‘ಬೇಶರಮ್‌’, ‘ಬಾಂಬೆ ವೆಲ್ವೆಟ್’ನಂತಹ ಅನೇಕ ಚಿತ್ರಗಳ ನಂತರ ಇದೀಗ ‘ಬಾಜಿರಾವ್ ಮಸ್ತಾನಿ’ಯಲ್ಲಿ ಬ್ಯುಸಿಯಾಗಿರುವ ರಣಬೀರ್‌, ಇದೆಲ್ಲದರ ಜೊತೆ ಜೊತೆಗೆ ರೆನೋ ಇಂಡಿಯಾದ ಕೆಲಸ–ಕಾರ್ಯಕ್ರಮಗಳಿಗೂ ಸಮಯ ಹೊಂದಿಸುವ ತಯಾರಿಯಲ್ಲಿದ್ದಾರೆ.

ರೆನೋ ಕಳೆದ ತಿಂಗಳು ತನ್ನ ನಾಲ್ಕನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ತನ್ನ ಬೆಳವಣಿಗೆಯ ಹೊಸ ಮತ್ತು ಕ್ರಿಯಾತ್ಮಕ ಅಧ್ಯಾಯವನ್ನು ಆರಂಭಿಸುವ ಪ್ರಯತ್ನವಾಗಿ ರಣಬೀರ್‌ ಜೊತೆಗೆ ಗುರುತಿಸಿಕೊಳ್ಳಲು ಮುಂದಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಣಬೀರ್, ‘ರೆನೋ ಅಪ್ರತಿಮ ಮತ್ತು ಸ್ಫೂರ್ತಿದಾಯಕ ಬ್ರಾಂಡ್ ಆಗಿ ಪ್ರಪಂಚದಾದ್ಯಂತ ಗುರುತಿಸಿಕೊಂಡಿದೆ. ಅತಿ ಕಡಿಮೆ ಅವಧಿಯಲ್ಲಿ ಭಾರತದಲ್ಲಿಯೂ ತನ್ನ ಅಸ್ತಿತ್ವ ಸಾಧಿಸಲು ಹೊರಟಿರುವ ಈ ಬ್ರಾಂಡ್‌ ಜೊತೆಗೆ ಗುರುತಿಸಿಕೊಳ್ಳಲು ನನಗೆ ಸಂತೋಷ ಎನಿಸುತ್ತದೆ’ ಎಂದಿದ್ದಾರೆ.

Write A Comment