ಮನೋರಂಜನೆ

ಪತ್ರಿಕೆಯಲ್ಲಿ ಪ್ರಕಟವಾದ ಕಥೆಯ ಎಳೆಯನ್ನಿಟ್ಟುಕೊಂಡು ನಿರ್ದೇಶಕ ದೇವರಾಜ್ ಪೂಜಾರಿ ‘ಸ್ಟೋರಿ ಆಫ್ ತಸ್ಕರ’ ಕಿರುಚಿತ್ರ

Pinterest LinkedIn Tumblr

taskaraಪತ್ರಿಕೆಯಲ್ಲಿ ಪ್ರಕಟವಾದ ಕಥೆಯ ಎಳೆಯನ್ನಿಟ್ಟುಕೊಂಡು ನಿರ್ದೇಶಕ ದೇವರಾಜ್ ಪೂಜಾರಿ ‘ಸ್ಟೋರಿ ಆಫ್ ತಸ್ಕರ’ ಕಿರುಚಿತ್ರ ನಿರ್ದೇಶಿದ್ದಾರೆ. ಇದು ಒಬ್ಬ ಕಳ್ಳನ ಬದುಕಿನ ಕುರಿತ ಕಥೆ. ನಿರ್ದೇಶಕ ದೇವರಾಜ್‌ಗೆ 8 ವರ್ಷಗಳಿಂದ ಹಿಂದಿ ಮತ್ತು ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಹಣ ಮತ್ತು ನಿರ್ದೇಶನ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವವಿದೆ.

ಬೆಂಗಳೂರಿನ ಸುತ್ತಮುತ್ತ 6 ದಿನ ಚಿತ್ರೀಕರಣ ನಡೆದಿದ್ದು ಚಿತ್ರೀಕರಣೋತ್ತರ ಕೆಲಸ ಪ್ರಗತಿಯಲ್ಲಿದೆ. ರಾಜೇಶ್ ಗಣಪತಿ ಮುಖ್ಯ ಪಾತ್ರದಲ್ಲಿದ್ದಾರೆ. ಪ್ರಚಾರಾರ್ಥವಾಗಿ ಸ್ಟಿಲ್‌ಗಳನ್ನು ಫೇಸ್‌ಬುಕ್‌ನಲ್ಲಿ (www.facebook.com/storyoftaskara) ಬಿಡುಗಡೆ ಮಾಡಲಾಗಿದೆ. ‘ಚಿತ್ರದ ಮೇಕಿಂಗ್ ಬಗ್ಗೆ ಗಮನ ನೀಡಲಾಗಿದ್ದು, ನಟನೆ, ಚೇಸಿಂಗ್ ದೃಶ್ಯಗಳಿಗಾಗಿ ಕಲಾವಿದರಿಗೆ ಸಾಕಷ್ಟು ತರಬೇತಿ ನೀಡಲಾಗಿದೆ.

ಕಿರುಚಿತ್ರ ನೋಡಿದವರಿಗೆ ಒಂದು ಕಥಾ ಚಿತ್ರ ನೋಡಿದ ಅನುಭವ ಕೊಡುತ್ತದೆ’ ಎಂದು ತಮ್ಮ ಪ್ರಯತ್ನವನ್ನು ಹೇಳಿಕೊಳ್ಳುತ್ತದೆ ಚಿತ್ರತಂಡ. ಕಿರಣ ಹೆಗಡೆ ಬಂಡವಾಳ ಹೊಂದಿಸಿದ್ದಾರೆ. 30 ರಿಂದ 40 ನಗರ -ಪ್ರದೇಶದ ಸ್ಥಳೀಯ ವಾಹಿನಿಗಳಲ್ಲಿ ಚಿತ್ರ ಬಿಡುಗಡೆಗೊಳಿಸುವುದು ತಂಡದ ಯೋಜನೆ. ‘ಸ್ಟೋರಿ ಆಫ್ ತಸ್ಕರ’ಕ್ಕೆ ಕೀರ್ತನ್ ಪೂಜಾರಿ ಛಾಯಾಗ್ರಹಣ, ಸುರೇಂದ್ರನಾಥ್ ಸಂಗೀತ ಹಾಗೂ ಮೋಹನ್ ಸಂಕಲನ ಇದೆ.

Write A Comment