ಕನ್ನಡ ನಟಿ ಪ್ರಣಿತಾ ಸುಭಾಷ್ ಬಾಲಿವುಡ್ ನಟ ಹೃತಿಕ್ ರೋಷನ್’ರ ಜೊತೆಯಾಗಿ ಕಾಣಿಸಿಕೊಂಡ ಫೋಟೊವೊಂದು ಈಗ ಸಾಮಾಜಿಕ ತಾಣಗಳಲ್ಲಿ ಹಸಿ ಬಿಸಿಯಾಗಿ ಹರಿದಾಡುತ್ತಿದೆ.
ಈ ಫೋಟೊ ನೋಡಿ ಕನ್ನಡತಿ ಪ್ರಣಿತಾ ಹೃತಿಕ್’ರ ಹೊಸ ಚಿತ್ರಕ್ಕೆ ನಾಯಕಿ ಎಂದು ನೀವು ಅಂದುಕೊಂಡ್ರೆ ಅದು ನಿಮ್ಮ ಊಹೆ ಅಷ್ಟೆ, ಯಾಕೆಂದ್ರೆ ಪ್ರಣಿತಾ ಹೃತಿಕ್’ರನ್ನು ಭೇಟಿ ಮಾಡಿದ್ದು ಜೂನ್’ನಲ್ಲಿ ಮಲೇಷ್ಯಾದಲ್ಲಿ ನಡೆದ 16 ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು (IIFA) ಸಮಾರಂಭದಲ್ಲಿ.
ಫಿಲ್ಮ್ ಇಂಡಸ್ಟ್ರಿಯ ಖ್ಯಾತನಾಮರು ಭಾಗವಹಿಸುವ ಈ ಆವಾರ್ಡ್ ಸಮಾರಂಭದಲ್ಲಿ ದಕ್ಷಿಣ ಭಾರತದ ತಾರೆಗಳು ಹಾಗೂ ಬಾಲಿವುಡ್ ತಾರೆಗಳು ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ.
ಇದೇ ಸಂದರ್ಭದಲ್ಲಿ ಬಾಲಿವುಡ್ ಕ್ರಿಶ್’ರನ್ನು ಭೇಟಿಯಾಗಿದ್ದ ಬೆಂಗಳೂರು ಬೆಡಗಿ ಪ್ರಣಿತಾ ಜೊತೆಯಾಗಿ ಸೆಲ್ಫಿ ತೆಗೆಸಿಕೊಂಡಿದ್ದರಲ್ಲದೆ, ಹೃತಿಕ್ ರೋಷನ್’ರೊಂದಿಗೆ ಕೆಲಹೊತ್ತು ಚಿಟ್-ಚಾಟ್ ಮಾಡಿದ್ದಾರೆ.ಹಾಗೆ ತೆಗೆದ ಫೋಟೊ ಪ್ರಣಿತಾ ಬಾಲಿವುಡ್’ಗೆ ಹಾರಲಿದ್ದಾರೆಂಬ ಗುಮಾನಿಯನ್ನು ಸಾಮಾಜಿಕತಾಣದಲ್ಲಿ ಹುಟ್ಟು ಹಾಕಿತ್ತು.
ಪೊರ್ಕಿ ಚಿತ್ರದ ಮೂಲಕ ಸ್ಯಾಂಡಲ್ ವುಡ್’ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ಪ್ರಣಿತಾ ಸುಭಾಷ್ ಕೆಲ ಕನ್ನಡ ಸಿನಿಮಾಗಳಲ್ಲಿ ಮಿಂಚಿದ ನಂತರ ಕಾಲಿವುಡ್-ಟಾಲಿವುಡ್ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮೂಲಕ ಸೌತ್ ಟಾಪ್ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ .
-ಕಪ್ಪು ಮೂಗುತ್ತಿ
-ಉದಯವಾಣಿ