ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಉಪ್ಪಿ 2’ ಚಿತ್ರ ಬಾಕ್ಸಾಫೀಸಿನಲ್ಲಿ ಇನ್ನಿಲ್ಲದಂತೆ ಸದ್ದು ಮಾಡುತ್ತಿದೆ. ಚಿತ್ರದ ಗಳಿಕೆಯ ವೇಗವನ್ನು ನೋಡುತ್ತಿದ್ದರೆ ಈ ಚಿತ್ರ ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆಯನ್ನು ಬರೆಯಬಹುದೆಂದು ಹೇಳಲಾಗುತ್ತಿದೆ.
ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲೂ ಈ ಚಿತ್ರ ಭರ್ಜರಿ ಗಳಿಕೆ ಮಾಡಿದೆ ಎನ್ನಲಾಗಿದ್ದು, ಹೊರ ರಾಜ್ಯ ಹಾಗೂ ವಿದೇಶದಲ್ಲೂ ಚಿತ್ರ ಏಕ ಕಾಲದಲ್ಲಿ ತೆರೆ ಕಂಡಿದೆ. ಉಪೇಂದ್ರರ ‘ಉಪ್ಪಿ 2′ ಶೀಘ್ರದಲ್ಲೇ 50 ಕೋಟಿ ರೂ. ಗಳಿಕೆ ಮಾಡಬಹುದೆಂದು ಹೇಳಲಾಗುತ್ತಿದ್ದು, ಇದು ಸಾಧ್ಯವಾದರೇ ಕನ್ನಡ ಚಿತ್ರವೊಂದು ’50 ಕೋಟಿ ಕ್ಲಬ್’ ಗೆ ಸೇರಿದ ಹೆಗ್ಗಳಿಕೆಗೆ ‘ಉಪ್ಪಿ 2’ ಪಾತ್ರವಾಗಲಿದೆ.
ಅಷ್ಟಕ್ಕೂ ಉಪೇಂದ್ರರವರ ಚಿತ್ರಗಳ ಕುರಿತು ಪ್ರೇಕ್ಷಕರಿಗೆ ಯಾಕಪ್ಪಾ ಈ ಪರಿ ಕುತೂಹಲವೆಂದು ಗಮನಿಸುತ್ತಾ ಹೋದರೆ ಅದಕ್ಕೆ ಕಾರಣ ಚಿತ್ರವನ್ನು ಅವರು ಪ್ರಸ್ತುತಪಡಿಸುವ ರೀತಿ. ಸಮಾಜದಲ್ಲಿನ ಹುಳುಕುಗಳನ್ನು ತಮ್ಮದೇ ಶೈಲಿಯಲ್ಲಿ ಬಿಚ್ಚಿಡುತ್ತಾ ಉಪೇಂದ್ರ ಪ್ರೇಕ್ಷಕರಿಗೆ ಅತ್ಮೀಯರಾಗುತ್ತಾರೆ. ತಮ್ಮ ಚಿತ್ರಗಳಲ್ಲಿ ಉಪೇಂದ್ರರವರು ಹೇಳುವ ಕಟು ಸತ್ಯಗಳು ದೈನಂದಿನ ಬದುಕಿನಲ್ಲಿ ದಿನನಿತ್ಯ ಘಟಿಸುವಂತದ್ದೇ ಆಗಿರುತ್ತವೆ. ಈ ಎಲ್ಲ ಕಾರಣಗಳಿಂದಾಗಿ ಉಪೇಂದ್ರ ಪ್ರೇಕ್ಷಕರಿಗೆ ಹೆಚ್ಚು ಆಪ್ತವಾಗುತ್ತಾ ಹೋಗುತ್ತಾರೆ.
2 Comments
I have see picture part 2 so confusion…..
…………………………………………………………………………………………………………………………………………………………………………………………………………………………………………………………………………………………………………………………………………………………………………………love…….. you uppi sir