ಮನೋರಂಜನೆ

ಮತ್ತೊಂದು ದಾಖಲೆ ನಿರ್ಮಿಸಿದ ರಂಗಿತರಂಗ !

Pinterest LinkedIn Tumblr

rangiಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ರಂಗಿತರಂಗ ಚಿತ್ರ ಅಮೆರಿಕಾದಲ್ಲಿ ಅಬ್ಬರದ ಪ್ರದರ್ಶನ ಕಾಣುತ್ತಿದ್ದು ಮತ್ತೊಂದು ದಾಖಲೆಗೆ ಪಾತ್ರವಾಗಿದೆ.

ಅಮೆರಿಕದಲ್ಲಿ ಕನ್ನಡ ಸಿನಿಮಾಗಳು ಬಿಡುಗಡೆಯಾದರೂ ಸಹ ‘ತುಂಬು’ ಪ್ರದರ್ಶನ ಕಾಣುವುದು ಕಡಿಮೆ. ಆದರೆ  ಸ್ಯಾನ್ ಜೋಸ್ ನಲ್ಲಿ ಕಳೆದ ಬಾರಿಯ ವೀಕೆಂಡ್ ನಲ್ಲಿ ರಂಗಿತರಂಗದ 16 ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿದ್ದು  ಆ ಮೂಲಕ  ನ್ಯೂಯಾರ್ಕ್ ಟೈಮ್ಸ್’ನ ವೀಕೆಂಡ್ ಬಾಕ್ಸ್ ಆಫೀಸ್ ಕಲೆಕ್ಷನ್ ಲಿಸ್ಟ್’ನಲ್ಲಿ ರಂಗಿತರಂಗ 27ನೇ ಸ್ಥಾನ ಪಡೆದಿದೆ.

ಇನ್ನೂ ವಿಶೇಷವೆಂದರೆ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಮೊತ್ತಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿ ರಂಗಿತರಂಗಕ್ಕೆ ಪ್ರಾಪ್ತವಾಗಿದ್ದು ಈ ಪಟ್ಟಿಯಲ್ಲಿ ಬಜರಂಗಿ ಭಾಯಿಜಾನ್ ಚಿತ್ರವನ್ನೂ ಮೀರಿಸಿರುವುದು ನಿಜಕ್ಕೂ ಶ್ಲಾಘನೀಯ.

Write A Comment