ಮನೋರಂಜನೆ

ಟೈಗರ್ ಚಿತ್ರದ ಡಿಜಿಟಲ್ ಪೋಸ್ಟರ್ ನಲ್ಲಿ ಶಿವನ ಪಾತ್ರಧಾರಿ

Pinterest LinkedIn Tumblr

nandakishoreಟೈಗರ್ ಎಂಬ ಹೊಸ ಚಿತ್ರವನ್ನು ನಿರ್ದೇಶಿಸುತ್ತಿರುವ ನಿರ್ದೇಶಕ ನಂದ ಕಿಶೋರ್, ಚಿತ್ರದ ನಾಯಕ ಪ್ರದೀಪ್ ಹುಟ್ಟುಹಬ್ಬಕ್ಕೆ ಡಿಜಿಟಲ್ ಪೋಸ್ಟರ್ ನ್ನು ಬಿಡುಗಡೆಗೊಳಿಸಿದ್ದಾರೆ.

ನಾಯಕ ಪ್ರದೀಪ್ ಅವರನ್ನು ಹೊಸ ಅವತಾರದಲ್ಲಿ ತೋರಿಸಿರುವ ನಂದ ಕಿಶೋರ್, ಪೋಸ್ಟರ್ ನಲ್ಲಿ ಪ್ರದೀಪ್ ಗೆ ಬೈಕ್  ನೊಂದಿಗೆ ಇರುವ ಶಿವನ ವೇಷ ಹಾಕಿಸಿದ್ದಾರೆ. ಈ ವೇಷ ಚಿತ್ರದ ಒಂದು ಭಾಗವಾಗಿದೆ ಎಂದು ನಂದಕಿಶೋರ್ ಹೇಳಿದ್ದಾರೆ. ಚಿತ್ರದ ಶೀರ್ಷಿಕೆ ‘ಟೈಗರ್ ಗೆ  ತಮ್ಮ ತಂದೆ ಸುಧೀರ್ ಅವರೇ ಪ್ರೇರಣೆ, ಈ ಚಿತ್ರಕ್ಕೆ ಟೈಗರ್ ಎಂದು ಹೆಸರಿಡುವುದರ ಹಿಂದಿನ ಕಾರಣ ಚಿತ್ರದ ಮಧ್ಯಭಾಗದಲ್ಲಿ ತಿಳಿಯಲಿದೆ ಎಂದಿದ್ದಾರೆ ನಂದಕಿಶೋರ್.

ಪ್ರದೀಪ್ ನಾಯಕನಾಗಿರುವ ಚಿತ್ರಕ್ಕೆ ಟೈಗರ್ ಎಂದು ಹೆಸರಿಡಲು ಭಾವನಾತ್ಮಕ ಹಿನ್ನೆಲೆಯಿದ್ದು, 1986 ರಲ್ಲಿ ತೆರೆಕಂಡ ಟೈಗರ್ ಎಂಬ ಚಿತ್ರದಿಂದ ನಟ ಪ್ರಭಾಕರ್ ಟೈಗರ್ ಪ್ರಭಾಕರ್ ಆದರು, ಅಂತೆಯೇ ಸುಧೀರ್ ಅವರಿಗೂ ಈ ಚಿತ್ರ ತುಂಬಾ ಜನಪ್ರಿಯತೆ ತಂದುಕೊಟ್ಟಿತ್ತು, ಆದ್ದರಿಂದ ಟೈಗರ್ ಎಂಬ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ನಂದಕಿಶೋರ್ ತಿಳಿಸಿದ್ದಾರೆ.

ಆಕ್ಷನ್- ಕಾಮಿಡಿ ಚಿತ್ರ ಇದಾಗಿದ್ದು, ಮಧುರಾಮಿ ಚಿತ್ರದ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಲಾ ನಾಣಿ, ರವಿಶಂಕರ್, ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ ನಟಿಸಿದ್ದಾರೆ.

Write A Comment