ಮನೋರಂಜನೆ

ಬಾಲಿವುಡ್’ನಲ್ಲಿ ಹೊಸ ಹೆಜ್ಜೆಯಿಡಲಿರುವ ನಟಿ ಸೋನಂ ಕಪೂರ್

Pinterest LinkedIn Tumblr

sonamಬಿಟೌನ್ ಟಾಲಿ ಬಬ್ಲಿ ನಟಿ ಸೋನಂ ಕಪೂರ್ ಬಾಲಿವುಡ್ ಟಾಪ್ 10 ಅತ್ಯುತ್ತಮ ನಟಿಮಣಿಯರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವಲ್ಲಿ ಯಶಸ್ವಿಯಾದವರು. ಈಗ ಈ ನಟಿ ತಮ್ಮದೆಯಾದ ಪ್ರೊಡಕ್ಷನ್ ಬ್ಯಾನರ್ ಪ್ರಾರಂಭಿಸಿ ಉತ್ತಮ ಚಿತ್ರಗಳ ನಿರ್ಮಾಪಕಿಯಾಗಲು ನಿರ್ಧರಿಸಿದ್ದಾರೆ.

ಸೋನಂ ಕಪೂರ್ ತಂದೆ ಬಾಲಿವುಡ್ ನಟ ಅನಿಲ್ ಕಪೂರ್ ಈಗಾಗಲೇ ಚಿತ್ರ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಹಾಗೆಯೇ ತಂಗಿ ರಿಹಾ ಕಪೂರ್ ಕೂಡ ಸೋನಂ ಅಭಿನಯದ ಖೂಬ್ ಸೂರತ್ ಚಿತ್ರ ನಿರ್ಮಿಸುವ ಮೂಲಕ ನಿರ್ಮಾಪಕಿಯಾಗಿ ಬಾಲಿವುಡ್’ಗೆ ಎಂಟ್ರಿ ಕೊಟ್ಟಿದ್ದರು.

ಈಗ ಬ್ಯಾಟಲ್ ಆಫ್ ಬಿಟ್ಟೊರ ಚಿತ್ರಕ್ಕೆ ಸ್ವಂತಃ ಸೋನಂ ಹಣ ಹೂಡುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಹೊಸ ಚಿತ್ರವು ಪೊಲಿಟಿಕಲ್ ಫ್ಯಾಮಿಲಿಯ ಕಥೆ ಹೊಂದಿರಲಿದೆ. ಖೂಬ್ ಸೂರತ್ ಚಿತ್ರದಲ್ಲಿ ಸೋನಂ ಕಪೂರ್’ಗೆ ಜೋಡಿಯಾಗಿ ನಟಿಸಿದ್ದ
ಫವಾದ್ ಖಾನ್ ಈ ಚಿತ್ರಕ್ಕೆ ನಾಯಕನಾಗಿರುತ್ತಾರೆ.

ಅತ್ಯುತ್ತಮ ಅಭಿನಯದ ಮೂಲಕ ಬಾಲಿವುಡ್’ನಲ್ಲಿ ತಂದೆಗೆ ತಕ್ಕ ಮಗಳಾಗಿ ಮಿಂಚಿದ್ದ ಸೋನಂ ಕಪೂರ್ ನಿರ್ಮಾಪಕಿಯಾಗಿ ಮಿಂಚಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
-ಕಪ್ಪು ಮೂಗುತ್ತಿ
-ಉದಯವಾಣಿ

Write A Comment