ಮುಂಬೈ: ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜನ ಮನಸ್ಸು ಗೆದ್ದಿರುವ ಬಾಲಿವುಡ್ ಚೆಲುವೆ ಹಜಲ್ ಜತೆ ಪ್ರೀತಿ, ಪ್ರೇಮ ಎಂದು ಸುತ್ತಾಡುತ್ತಿದ್ದು ಅವಳ ಜತೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಸಾಕಷ್ಟು ಚೆಲುವೆಯರೊಂದಿಗೆ ಡೇಟಿಂಗ್ ಮಾಡಿದ್ದ ಯುವಿಗೆ ಹಜಲ್ ಪ್ರೇಮದ ಕಿಚ್ಚು ಹಚ್ಚಿದ್ದಾಳೆ. ಯುವಿ ಬೆನ್ನ ಹಿಂದೆ ಚೆಂದುಳ್ಳಿ ಚೆಲುವೆಯರು ಬಿದ್ದಿದ್ದರು. ಸಿಕ್ಕಾಪಟ್ಟೆ ಬೆಡಗಿಯರ ಜತೆ ಯುವಿ ಹೆಸರು ಥಳಕು ಹಾಕಿಕೊಂಡಿತ್ತು.
ಟೀಂಇಂಡಿಯಾದಲ್ಲಿ ಸಿಕ್ಸರ್‌ಗಳನ್ನು, ಬೌಂಡರಿಗಳನ್ನು ಬಾರಿಸುವ ಮೂಲಕ ಯುವಿ ಎಷ್ಟು ಸದ್ದುಮಾಡಿದ್ದರೋ, ಗರ್ಲ್‌ಫ್ರೆಂಡ್ಸ್ ಜತೆ ಸುತ್ತಾಡುವುದರಲ್ಲೂ ಯುವಿ ಅದಕ್ಕಿಂತ ಹೆಚ್ಚು ಸದ್ದುಮಾಡಿದ್ದರು.
ಯುವಿ ಜತೆ ತಳಕುಹಾಕಿಕೊಂಡ ಮೊದಲ ಚಲುವೆ ಕಿಮ್ ಶರ್ಮಾ. ಆದರೆ ಇದ್ದಕ್ಕಿದ್ದಂತೆ ಕಿಮ್ ಶರ್ಮಾಗೆ ಕೈಕೊಟ್ಟು ದೀಪಿಕಾ ಜತೆ ಲವ್ವಿ ಡವ್ವಿ ಷುರುಮಾಡಿದ್ದರು. ದೇಶವಿದೇಶಗಳಲ್ಲಿ ಇವರ ರೊಮಾನ್ಸ್ ಸಾಕಷ್ಟು ಸದ್ದು ಮಾಡಿತ್ತು.
ದೀಪಿಕಾ ಜತೆ ಲವ್ ಬ್ರೇಕ್ ಆದಮೇಲೆ ಅಮಿಷಾ ಪಟೇಲ್ ಬೆನ್ನುಬಿದ್ದರು. ಈಗ ಇವೆಲ್ಲಾ ಲವ್‌ಗಳಿಗೆ ಬ್ರೇಕ್ ಹಾಕಿದ ಯುವಿ ಹಜಲ್‌ಳನ್ನು ಪರ್ಮನೆಂಟಾಗಿ ವರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಲು ನಿರ್ಧರಿಸಿದ್ದಾರೆ.