ಅಂತರಾಷ್ಟ್ರೀಯ

ಪಾಕಿಸ್ತಾನ ಚಿತ್ರರಂಗಕ್ಕೆ ಎಂಟ್ರಿ ನೀಡಲಿರುವ ಕರೀನಾ ಕಪೂರ್ !

Pinterest LinkedIn Tumblr

kareenakapoor

ಮುಂಬೈ: ಪಾಕಿಸ್ತಾನ ಚಿತ್ರರಂಗಕ್ಕೆ ಬಾಲಿವುಡ್ ನಟಿ ಕರೀನಾ ಎಂಟ್ರಿ ಕೊಡಲಿದ್ದಾರೆ. ಸೈಫ್ ಸಿನಿಮಾಗಳನ್ನು ಬ್ಯಾನ್ ಮಾಡಿರುವ ಪಾಕಿಸ್ತಾನ ಕರೀನಾಗೆ ನಟಿಸಲು ಆಫರ್ ನೀಡಿದೆ.

ಬಾಲಿವುಡ್‍ನ ಬ್ಯುಸಿ ದಂಪತಿಯಲ್ಲಿ ಸೈಫ್, ಕರೀನಾ ಜೋಡಿ ಕೂಡ ಒಂದು. ಶೂಟಿಂಗೂ ಮೇಕಪ್ಪು-ಪ್ಯಾಕಪ್ಪು ಎಂದು ಬ್ಯೂಸಿಯಾಗಿರುವ ಈ ದಂಪತಿ ಸಿನಿಜರ್ನಿಯಲ್ಲಿ ಡಿಫರೆಂಟ್ ಟ್ವಿಸ್ಟ್ ಸಿಕ್ಕಿದೆ. ಸೈಫ್ ಅಲಿಖಾನ್ ಅಭಿನಯದ ಚಿತ್ರಗಳಿಗೆ ಪಾಕ್ ಸೆನ್ಸಾರ್ ಮಂಡಳಿ ಬ್ಯಾನ್ ಮಾಡಿದರೆ ಕರೀನಾಗೆ ಪಾಕ್ ಸಿನಿಮಾಗಳಲ್ಲಿ ಅಭಿನಯಿಸುವಂತೆ ನಿರ್ದೇಶಕರು ಆಫರ್ ಕೊಟ್ಟಿದ್ದಾರೆ.

ಕರೀನಾ ಕಪೂರ್‍ಗೆ ಪಾಕ್ ಸಿನಿಮಾದಲ್ಲಿ ಆಫರ್ ಕೊಟ್ಟಿರುವುದು ಪಾಕ್ ಸಿನಿಮಾ ನಿರ್ದೇಶಕ ಶೋಯೆಬ್ ಮನ್ಸೂರ್. ಈಗಾಗಲೇ ಒಂದು ಸುತ್ತಿನ ಮಾತು-ಕತೆ ಕಂಪ್ಲೀಟ್ ಆಗಿದ್ದು ಮುಂದಿನ ವಾರ ದುಬೈನಲ್ಲಿ ಈ ಕುರಿತು ಫೈನಲ್ ಮೀಟಿಂಗ್ ಫಿಕ್ಸ್ ಮಾಡಲಾಗಿದೆಯಂತೆ. ಒಂದು ಕಡೆ ಸೈಫ್ ಅಭಿನಯದ ಸಿನಿಮಾಗಳಿಗೆ ಪಾಕಿಸ್ತಾನ ಸೆನ್ಸಾರ್ ಬೋರ್ಡ್ ನೋ ಎಂದಿದೆ. ಆದರೆ ಈಗ ಕರೀನಾಗೆ ಪಾಕಿಸ್ತಾನ ಸಿನಿಮಾದಲ್ಲಿ ಅಭಿನಯಿಸಲು ಆಫರ್ ಬಂದಿದ್ದು ಈ ಆಫರ್‍ನನ್ನು ಕರೀನಾ ಕಪೂರ್ ಸ್ವೀಕರಿಸುತ್ತಾರಾ ಅಥವಾ ಪಾಕ್ ಸಿನಿಮಾಗಳನ್ನು ಬೆಬೋ ರಿಜೆಕ್ಟ್ ಮಾಡ್ತಾರ ಎನ್ನುವುದು ಕುತೂಹಲ ಮೂಡಿಸಿದೆ.

Write A Comment