ಅಲಿಯಾ ಭಟ್ ಮತ್ತು ಸಿದ್ದಾರ್ಥ್ ಮಲ್ಹೋತ್ರ ಇಬ್ಬರೂ ಮೂರು ವರ್ಷಗಳ ಹಿಂದೆ ‘ಸ್ಟುಡೆಂಟ್ ಆಫ್ ದಿ ಇಯರ್’ ಸಿನಿಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಒಟ್ಟಿಗೆ ಅಡಿಯಿಟ್ಟವರು. ಇವರಿಬ್ಬರ ಸಂಬಂಧದ ಕುರಿತೂ ಬಿ–ಟೌನ್ ಹರಟೆಕಟ್ಟೆಯಲ್ಲಿ ಸಾಕಷ್ಟು ಗಾಳಿಸುದ್ದಿಗಳು ಹರಿದಾಡಿದ್ದವು.
ಈ ಜೋಡಿ ಮತ್ತೆ ಈಗ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದೆ. ಕರಣ್ ಜೋಹರ್ ಅವರ ‘ಕಪೂರ್ ಅಂಡ್ ಸನ್ಸ್’ ಚಿತ್ರದಲ್ಲಿ ಇವರಿಬ್ಬರೂ ತೆರೆ ಹಂಚಿಕೊಳ್ಳಲಿದ್ದಾರೆ.
‘ನಾವಿಬ್ಬರೂ ಕೆಲವು ಸಿನಿಮಾಗಳನ್ನು ಮಾಡಿದ್ದೇವೆ. ಈಗ ಮತ್ತೆ ಒಟ್ಟಿಗೆ ನಟಿಸುತ್ತಿದ್ದೇವೆ. ಅದನ್ನು ಬಿಟ್ಟರೆ ನಾವು ಮೊದಲಿನಂತೆಯೇ ಇದ್ದೇವೆ. ಸಿದ್ಧಾರ್ಥ್ ಇನ್ನಷ್ಟು ಕಂಫರ್ಟ್ ಆಗಿದ್ದಾರೆ. ಅವರ ಆತ್ಮವಿಶ್ವಾಸ ಹೆಚ್ಚಿದೆ. ಹೆಚ್ಚು ಖುಷಿಯಾಗಿದ್ದಾರೆ’ ಎಂದು ಅಲಿಯಾ, ಸಿದ್ಧಾರ್ಥ್ ಅವರನ್ನು ಹೊಗಳಿದ್ದಾರೆ.
‘ಸಿದ್ಧಾರ್ಥ್ ಎಂಥ ವ್ಯಕ್ತಿಯೆಂದರೆ ಚಿತ್ರೀಕರಣದ ಸೆಟ್‌ನಲ್ಲಿ ಎಲ್ಲರನ್ನೂ ಅವರು ಖುಷಿಗೊಳಿಸುತ್ತಾರೆ. ಎಲ್ಲರೂ ಸಂತೋಷವಾಗಿರಬೇಕು ಎಂದು ಬಯಸುತ್ತಾರೆ’ ಎಂದೂ ಅವರು ಹೊಗಳಿದ್ದಾರೆ.