ಮನೋರಂಜನೆ

ಜನರ ನೋಟ ಬದಲಾಗಿದೆ: ಸನ್ನಿ ಲಿಯಾನ್‌

Pinterest LinkedIn Tumblr

sunuy‘ನಾನು ಬಾಲಿವುಡ್‌ ಜಗತ್ತನ್ನು ಪ್ರವೇಶಿಸಿದ ಸಂದರ್ಭದಲ್ಲಿ ಸಾಕಷ್ಟು ಆತಂಕಗಳನ್ನು ಎದುರಿಸಿದ್ದೆ. ಆದರೆ ಕಾಲಕ್ರಮೇಣ ಚಿತ್ರರಂಗ ನನ್ನನ್ನು ನೋಡುವ ದೃಷ್ಟಿಕೋನ ಬದಲಾಗಿದೆ’ ಹೀಗೆಂದು ನೆಮ್ಮದಿಯ ನಿಟ್ಟುಸಿರು ಬಿಟ್ಟವರು ಬಾಲಿವುಡ್‌ನ ಹಾಟ್‌ ಬೆಡಗಿ ಸನ್ನಿ ಲಿಯಾನ್‌.

‘ನೀಲಿ ತಾರೆ’ ಎಂದೇ ಜನಜನಿತರಾಗಿದ್ದ ಸನ್ನಿ, 2012ರಲ್ಲಿ ‘ಜಿಸ್ಮ್‌ 2’ ಸಿನಿಮಾ ಮೂಲಕ ಬಿ–ಟೌನ್‌ಗೆ ಅಡಿಯಿರಿಸಿದ್ದರು. ‘ಇತ್ತೀಚೆಗೆ ನಾನು ಅನೇಕ ಒಳ್ಳೆಯ ವ್ಯಕ್ತಿಗಳನ್ನು ಭೇಟಿಯಾಗಲು ಸಾಧ್ಯವಾಯಿತು. ವಿಶೇಷವಾಗಿ ಈ ವರ್ಷ. ಈ ವರ್ಷ ನಾನು ಹೊಸ ಸ್ನೇಹಿತರನ್ನೇನೂ ಮಾಡಿಕೊಂಡಿಲ್ಲ. ಆದರೆ ಇರುವ ಸ್ನೇಹಿತರೊಂದಿಗೇ ಹಿಂದಿಗಿಂತ ಭಿನ್ನವಾಗಿ ಸಂವಾದಿಸಲು ಸಾಧ್ಯವಾಗಿದೆ. ನನಗೆ ಮತ್ತು ನನ್ನ ಪತಿಗೆ ಜನರು ಮೊದಲಿಗಿಂತ ಭಿನ್ನವಾಗಿ ಸ್ಪಂದಿಸುತ್ತಿದ್ದಾರೆ’ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಮೊದಲು ಚಿತ್ರರಂಗದ ಮಂದಿ ತಮ್ಮೊಂದಿಗೆ ಅಷ್ಟಾಗಿ ಬೆರೆಯದಿದ್ದದ್ದರ ಬಗ್ಗೆ ಬಗ್ಗೆ ಸನ್ನಿಗೆ ಕಹಿಭಾವನೆಯೇನೂ ಇಲ್ಲ. ‘ಈ ವಿಷಯಕ್ಕೆ ಸಂಬಂಧಿಸಿದಂತೇ ನಾನು ಜನರನ್ನು ದೂಷಿಸಲು ಇಷ್ಟಪಡುವುದಿಲ್ಲ. ಬಹುಶಃ ತಪ್ಪು ನನ್ನದೇ. ನಾನು ಪಾರ್ಟಿಗಳಿಗೆ ಜಾಸ್ತಿ  ಹೋಗುತ್ತಿರಲಿಲ್ಲ.

ಸಭೆ–ಸಮಾರಂಭಗಳಿಗೂ ಹೋಗುತ್ತಿರಲಿಲ್ಲ. ಆದ್ದರಿಂದ ಜನರೊಂದಿಗೆ ಬೆರೆಯಲು ಸಾಧ್ಯವಾಗಲಿಲ್ಲ’ ಎಂದು  ಅವರು ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ‘ಇನ್ನು ಮುಂದೆ ಹೆಚ್ಚು ಹೆಚ್ಚು ಮುಕ್ತವಾಗಿರಲು ಪ್ರಯತ್ನಿಸುತ್ತೇನೆ’ ಎಂದೂ ನಿರ್ಧರಿಸಿರುವ ಸನ್ನಿ ಅವರಿಗೆ ಈಗಲೂ ಬಾಲಿವುಡ್‌ ತಾರೆಗಳನ್ನು ಮುಖಾಮುಖಿ ಕಂಡಾಗ ಮಾತನಾಡಿಸಲು ನಾಚಿಕೆಯಾಗುತ್ತದಂತೆ.

Write A Comment