ಮನೋರಂಜನೆ

ಪ್ರಿಯಾಂಕಾ ಚೋಪ್ರಾ ಏಷ್ಯಾದ ಸೆಕ್ಸಿ ಮಹಿಳೆ: ಯುಕೆ ವಾರ್ಷಿಕ ಸಮೀಕ್ಷೆ

Pinterest LinkedIn Tumblr

priyanka chopra abc show_0

ಲಂಡನ್‌ : ಖ್ಯಾತ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರು ಲಂಡನ್‌ನ ಪತ್ರಿಕೆಯೊಂದು ಜಾಗತಿಕ ಮಟ್ಟದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಏಷ್ಯಾದ ಸೆಕ್ಸಿ ಮಹಿಳೆ ಎಂಬ ಬಿರುದನ್ನು ಉಳಿಸಿಕೊಳ್ಳುವಲ್ಲಿ ಪ್ರಸಕ್ತ ವರ್ಷವೂ ಯಶಸ್ವೀಯಾಗಿದ್ದಾರೆ.

ಲಂಡನ್‌ನ ಈಸ್ಟರ್ನ್ ಐ ಎನ್ನುವ ವಾರ ಪತ್ರಿಕೆ ಸಾಮಾಜಿಕ ಜಾಲತಾಣಗಳ ಮೂಲಕ ಜಾಗತಿಕವಾಗಿ 50 ಮಂದಿ ಹಾಟ್‌ ಮಹಿಳೆಯರ ಕುರಿತಾಗಿ ಮತದಾನ ಮಾಡಲು ಕೇಳಿಕೊಂಡಿತ್ತು. ಲಕ್ಷಾಂತರ ಅಭಿಮಾನಿಗಳ ಮತ ಪಡೆದ ಮಾಜಿ ವಿಶ್ವಸುಂದರಿ,ಕ್ವಾಂಟಿಕೊ ಧಾರಾವಾಹಿ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿರುವ  ಪ್ರಿಯಾಂಕ ಟಾಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

‘ಈ ಶೀರ್ಷಿಕೆ ನಾನು ಉಳಿಸಿಕೊಂಡಿರುವುದು ನನಗೆ ತುಂಬಾ ಸಂತೋಷ ನೀಡಿದೆ . ನನಗೆ ಮತ ನೀಡಿದ ಎಲ್ಲರಿಗೂ ಧನ್ಯವಾದಗಳು. ಅಭಿಮಾನಿಗಳ ಅಭಿಪ್ರಾಯ ಬರಲು ಕಾರಣವಾದ’ ಈಸ್ಟರ್ನ್ ಐ ‘ ಗೂ ಸಹ ಧನ್ಯವಾದಗಳು’ ಎಂದು ಪ್ರಿಯಾಂಕ ಹೇಳಿದ್ದಾರೆ.

ಮಾದಕತೆ ಎನ್ನುವುದ ಮನಸ್ಸಿನಲ್ಲಿ ಇದೆ. ಮನಸ್ಸಿದ್ದರೆ ಎಲ್ಲವೂ ಮಾದಕವಾಗು
ತ್ತದೆ ನೆನಪಿಡಿ ಎಂದು ಮಹಿಳೆಯರಿಗೆ ಪ್ರಿಯಾಂಕ ಸಲಹೆ ನೀಡಿದ್ದಾರೆ.

ಪಟ್ಟಿಯಲ್ಲಿ ಬಾಲಿವುಡ್‌ ನಟಿಯರಾದ ದೀಪಿಕಾ ಪಡುಕೋಣೆ 4 ಕತ್ರಿನಾ ಕೈಫ್  5 , ನಿಯಾ ಶರ್ಮಾ 6, ಕರೀನಾ ಕಪೂರ್‌ ಖಾನ್‌ 7 ,ಗೌಹರ್‌ ಖಾನ್‌ 8 ಮತ್ತು ಸೋನಮ್‌ ಕಪೂರ್‌ 9 ನೇ ಸ್ಥಾನ ಪಡೆದುಕೊಂಡಿದ್ದಾರೆ.
-ಉದಯವಾಣಿ

Write A Comment