ಹೈದರಾಬಾದ್: ತೆಲುಗಿನ ಹಿರಿಯ ನಟ ಕಾಗ ರಂಗನಾಥ್(66) ಅವರು ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಂದು ಹೈದರಾಬಾದ್‌ನ ಕವಾಡಿಗೂಡದ ತಮ್ಮ ನಿವಾಸದಲ್ಲಿ ರಂಗನಾಥ್ ಅವರು ತಮ್ಮ ಆತ್ಮೀಯ ಸ್ನೇಹಿತನಿಗೆ “ಗುಡ್ ಬೈ’ ಎಂದು ಎಸ್ ಎಂಎಸ್ ಮಾಡಿ, ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ನಟನ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.
1973ರಲ್ಲಿ ‘ಚಂದನಾ’ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗ ಪ್ರವೇಶಿಸಿದ್ದ ರಂಗನಾಥ್ ಅವರು, ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಈ ಮಧ್ಯೆ, ಹಿರಿಯ ನಟ ಕಾಗರಂಗನಾಥ್ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರ ಕುಟುಂಬ ವರ್ಗ, ಈ ಸಂಬಂಧ ಮುಷಿರಾಬಾದ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.